ಪಂಪಾವನಕ್ಕೆ ಜಪಾನಿ ಮಾದರಿ ಟಚ್‌

  |   Koppalnews

„ದತ್ತು ಕಮ್ಮಾರ

ಕೊಪ್ಪಳ: ತುಂಗಭದ್ರಾ ತಟದಲ್ಲಿರುವ 70 ಎಕರೆ ವಿಸ್ತೀರ್ಣದ ಪಂಪಾವನಕ್ಕೆ ಇನ್ನಷ್ಟು ಮೆರಗು ಕೊಡಲು ತೋಟಗಾರಿಕೆ ಇಲಾಖೆ ಮುಂದಾಗಿದ್ದು, ಜಪಾನಿ ಗಾರ್ಡನ್‌ ಮಾದರಿಯಂತೆ ಪಂಪಾವನ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಮೊದಲ ಹಂತದ ಪ್ರಸ್ತಾವನೆಗೆ ಸಮ್ಮತಿ ಸಿಕ್ಕಿದ್ದು, 15 ಕೋಟಿಯಲ್ಲಿ ಡಿಪಿಆರ್‌ ಸಿದ್ಧತೆ ನಡೆದಿದೆ.

ಜಿಲ್ಲೆಯಲ್ಲಿ ಸುಸಜ್ಜಿತ ಹಾಗೂ 70 ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಬೇರೊಂದು ಉದ್ಯಾನವನವಿಲ್ಲ. ತುಂಗಭದ್ರಾ ಜಲಾಶಯ ನಿರ್ಮಾಣದ ಬಳಿಕ ಈ ಉದ್ಯಾನವನ ನಿರ್ಮಾಣಗೊಂಡಿದೆ. ಇಲ್ಲಿ ವಿವಿಧ ಬಗೆಯ ಸಸ್ಯ ಪ್ರಬೇಧಗಳಿವೆ. ಔಷಧೀಯ ಗುಣದಿರುವ ಸಸ್ಯಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ವಿವಿಧ ಅಲಂಕಾರ, ವಿನ್ಯಾಸದ ಚಿತ್ರಣಗಳನ್ನು ನೀವು ಕಾಣಬಹುದಾಗಿದೆ.

ಪ್ರತಿ ವರ್ಷ ತುಂಗಭದ್ರಾ ಜಲಾಶಯ ಭರ್ತಿಯಾದಾಗ ವಿವಿಧ ಭಾಗಗಳಿಂದ ಲಕ್ಷಾಂತರ ಪ್ರವಾಸಿಗರು ಡ್ಯಾಂ ವೀಕ್ಷಣೆಗೆ ಆಗಮಿಸುತ್ತಾರೆ. ಈ ವೇಳೆ ಕುಟುಂಬ ಸಮೇತರಾಗಿ ಉದ್ಯಾನವನದಲ್ಲಿ ಇಡೀ ದಿನ ವಿಶ್ರಮಿಸಿ ಖುಷಿಯಿಂದಲೇ ತಮ್ಮ ಊರುಗಳಿಗೆ ತೆರಳುತ್ತಾರೆ. ಇದಲ್ಲದೇ, ಸುತ್ತಲಿನ ಊರುಗಳ ಜನ ಶನಿವಾರ, ರವಿವಾರ ಹಾಗೂ ರಜಾ ದಿನಗಳಲ್ಲಿ ಕುಟುಂಬ ಸಮೇತರಾಗಿ ಇಲ್ಲಿಗೆ ಆಗಮಿಸಿ ಭೋಜನ ಸವಿದು ರಜಾ ದಿನವನ್ನು ಸಂತಸದಿಂದ ಕಳೆಯುತ್ತಾರೆ. ಸುತ್ತಮುತ್ತಲಿನ ಊರುಗಳ ಜನತೆಗೆ ಇದೊಂದು ಉತ್ತಮ ತಾಣವಾಗಿದೆ. ಇಂತಹ ಉದ್ಯಾನವನಕ್ಕೆ ಇನ್ನಷ್ಟು ಮೆರಗು ಕೊಡಲು, ಪ್ರವಾಸಿಗರನ್ನು ಇನಷ್ಟು ಆಕರ್ಷಿಸಲು ತೋಟಗಾರಿಕೆ ಇಲಾಖೆ ಹೊಸ ಯೋಜನೆ ಸಿದ್ಧಪಡಿಸುತ್ತಿದೆ....

ಫೋಟೋ - http://v.duta.us/gFBiIQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/zCXrQQAA

📲 Get Koppal News on Whatsapp 💬