ಪ್ರಸಾರಂಗದಿಂದ ಪಿಎಚ್‌ಡಿ ಪ್ರಬಂಧಗಳ ಪ್ರಕಟಣೆ

  |   Mysorenews

ಮೈಸೂರು: ಪ್ರಸಾರಂಗ ವತಿಯಿಂದ ಮೈಸೂರು ವಿವಿ ಸಂಶೋಧಕರು ಮಂಡಿಸಿದ ಪಿಎಚ್‌ಡಿ ಪ್ರಬಂಧಗಳನ್ನು ಪುಸ್ತಕವಾಗಿ ಪ್ರಕಟಿಸುವ ಚಿಂತನೆ ನಡೆಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಪ್ರಸಾರಂಗ ನಿರ್ದೇಶಕ ಪ್ರೊ.ಎಂ.ಜಿ. ಮಂಜುನಾಥ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಪ್ರಸಾರಂಗ ವತಿಯಿಂದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ 40 ಪುಸ್ತಕಗಳ ಲೋಕಾರ್ಪಣೆ ಹಾಗೂ ಪ್ರಚಾರೋಪನ್ಯಾಸ ಮಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಮೈಸೂರು ವಿವಿಯ ಸಂಶೋಧಕರು ಮಂಡಿಸಿದ ನೂರು ಪಿಎಚ್‌ಡಿ ಪ್ರಬಂಧಗಳನ್ನು ಪ್ರಸಾರಂಗ ಪುಸ್ತಕವನ್ನಾಗಿ ಪ್ರಕಟಿಸಿದೆ. ಇದರಿಂದ ಇತರೆ ವಿದ್ಯಾರ್ಥಿಗಳಿಗು ವಿಷಯವನ್ನು ತಲುಪಿಸಿದಂತಾಗುತ್ತದೆ. ಜೊತೆಗೆ ಸಂಗ್ರಹಿಸಿ ಇಡಲು ಸಹಕಾರಿ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಪ್ರಸಾರಂಗ ವತಿಯಿಂದ ಯೋಗ್ಯ ಪ್ರಬಂಧಗಳನ್ನು ಪುಸ್ತಕಗಳ ರೂಪದಲ್ಲಿ ಹೊರತರುವ ಚಿಂತನೆ ನಡೆಸಲಾಗಿದೆ. ಇದಕ್ಕೆ ಕುಲಪತಿಗಳು ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಪ್ರೋತ್ಸಾಹ: ಕಳೆದ ನಾಲ್ಕು ತಿಂಗಳಲ್ಲಿ ಪ್ರಸಾರಂಗದಿಂದ 20 ಪುಸ್ತಕಗಳನ್ನು ಪ್ರಕಟ ಮಾಡಲಾಗಿದೆ. ಇದುವರೆಗೆ 3 ಸಾವಿರ ಪುಸ್ತಕಗಳನ್ನು ಪ್ರಕಟಿಸಿ, ಹೊಸ ಬರಹಗಾರರಿಗೆ ಹಾಗೂ ವಿದ್ವಾಂಸರಿಗೆ ಪ್ರೋತ್ಸಹ ನೀಡಲಾಗಿದೆ. ಅಲ್ಲದೇ ಪ್ರಬುದ್ಧ ಕರ್ನಾಟಕ ಎಂಬ ಪುಸ್ತಕದ ವಿಶೇಷ ಸಂಚಿಕೆಯನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದರು....

ಫೋಟೋ - http://v.duta.us/KH8M6gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/NBJZ0wAA

📲 Get Mysore News on Whatsapp 💬