ಪ್ಲಾಸ್ಟಿಕ್‌ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳನ್ನು ಕಂಪನಿಗೇ ವಾಪಸ್‌ ಕಳುಹಿಸುವ ಮಕ್ಕಳು!

  |   Mysorenews

ನಂಜನಗೂಡು: ನಾಳೆಗಳು ನಮ್ಮದು, ನಿಮ್ಮ ಕಸ ನಿಮಗೆ.... "ನಿಮ್ಮ ಪ್ಲಾಸ್ಟಿಕ್‌ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳನ್ನು ನಮಗೆ ಮರುಬಳಕೆ ಮಾಡಲಾಗುತ್ತಿಲ್ಲ. ಆ ವ್ಯವಸ್ಥೆಯೂ ನಮ್ಮಲ್ಲಿಲ್ಲ. ನಿಮ್ಮ ತ್ಯಾಜ್ಯ ನಮಗೆ ಬೇಕಿಲ್ಲ. ಈಗಾಗಲೇ ನಾವು ಇದರ ದುಷ್ಪರಿಣಾಮ ಅನುಭವಿಸುತ್ತಿದ್ದೇವೆ. ಹೀಗಾಗಿ ನಿಮ್ಮ ಉತ್ಪನ್ನಗಳಿಗೆ ನೀವು ಬಳಸುವ ಪ್ಲಾಸ್ಟಿಕ್‌ಗಳನ್ನು ನಿಮಗೇ ಕಳುಹಿಸುತ್ತಿದ್ದೇವೆ. ನೀವೇ ಮರುಬಳಕೆ ಮಾಡಿ. ಜತೆಗೆ ಪರಿಸರಕ್ಕೆ ಪ್ಲಾಸ್ಟಿಕ್‌ ಬಾರದಂತೆ ನೋಡಿಕೊಳ್ಳಿ'

ಇದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಿಗೆ ನಂಜನಗೂಡು ತಾಲೂಕಿನ ಹೆಗ್ಗಡಳ್ಳಿ ಶಾಲೆಯ ವಿದ್ಯಾರ್ಥಿಗಳು ಆಯ ಕಂಪನಿಗಳ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳೊಂದಿಗೆ ಕಳುಹಿಸಿದ ಪತ್ರ.

ಪ್ಲಾಸ್ಟಿಕ್‌ ನಿಷೇಧಕ್ಕೆ ಎಷ್ಟೇ ಜಾಗೃತಿ, ಕಾನೂನು ಕ್ರಮಗಳಿದ್ದರೂ ಇದರ ಬಳಕೆ ಮಾತ್ರ ನಿಲ್ಲುತ್ತಿಲ್ಲ. ಕಂಪನಿಗಳ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳು ಹೆಚ್ಚುತ್ತಿದ್ದು, ಇವುಗಳ ಮರುಬಳಕೆ ಸವಾಲು ಆಗಿದೆ. ಹೀಗಾಗಿ ಶಾಲೆ ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ವಿವಿಧ ಕಂಪನಿಗಳ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳನ್ನು ಆಯ್ದು, ಒಂದೆಡೆ ಸಂಗ್ರಹಿಸಿ, ಲೇಬಲ್‌ ಆಧಾರದ ಮೇಲೆ ಅಂಚೆ ಕಚೇರಿ ಮೂಲಕ ಕಂಪನಿಗಳಿಗೆ ವಾಪಸ್‌ ಕಳುಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಈ ರೀತಿಯ ವಿಭಿನ್ನ ಅಭಿಯಾನ ನಡೆಸಿ ಸಂಸ್ಥೆಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇದಕ್ಕೆ ಕೋಲ್ಗೇಟ್‌ ಕಂಪನಿಯು, ಪ್ರತಿಕ್ರಿಯೆ ನೀಡಿದ್ದು, ಪರಿಸರ ಸ್ನೇಹಿ ಪ್ಯಾಕಿಂಗ್‌ ಮೆಟೀರಿಯಲ್‌ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದೆ....

ಫೋಟೋ - http://v.duta.us/yamcvgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/2uX2rwAA

📲 Get Mysore News on Whatsapp 💬