ಬಗೆಹರಿಯದ ಗ್ರಂಥಾಲಯದ ಜಾಗದ ಸಮಸ್ಯೆ

  |   Hassannews

ಸಕಲೇಶಪುರ: ತಾಲೂಕು ಗ್ರಂಥಾಲಯ ಕಟ್ಟಲು ಬಂದಿರುವ ಅನುದಾನ ಜಾಗದ ಸಮಸ್ಯೆಯಿಂದಾಗಿ ಅನುದಾನ ಹಿಂತಿರುಗಿ ಹೋಗುವ ಸಾಧ್ಯತೆ ಇದ್ದು ಇದರಿಂದ ಸುಂದರ ಗ್ರಂಥಾಲಯ ಕಟ್ಟಡ ತಾಲೂಕಿಗೆ ಮತ್ತೊಮ್ಮೆ ಮರೀಚಿಕೆಯಾಗುವ ಸಾಧ್ಯತೆಯಿದೆ.

ಪಟ್ಟಣದ ಇಂದಿರಾ ಕ್ಯಾಂಟೀನ್‌ ಪಕ್ಕ ಸುಮಾರು 2 ಗುಂಟೆಯಷ್ಟು ಗ್ರಂಥಾಲಯಕ್ಕೆ ಮೀಸಲಾದ ಜಾಗವನ್ನು ಎತ್ತಿನಹೊಳೆ ಯೋಜನೆ ಕಚೇರಿಗೆ ನೀಡಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಕಚೇರಿ ಪಕ್ಕದಲ್ಲೇ ಇದ್ದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರುವ ಹೆಂಚಿನ ಮನೆಯೊಂದನ್ನು ಗ್ರಂಥಾಲಯಕ್ಕಾಗಿ ಕೆಡವಿ ಆ ಜಾಗದಲ್ಲಿ ಗ್ರಂಥಾಲಯ ಕಟ್ಟಡ ಕಟ್ಟುವ ತೀರ್ಮಾನಕ್ಕೆ ಬರಲಾಗಿತ್ತು.

ಈ ಹಿನ್ನೆಲೆಯಲ್ಲಿ ಗ್ರಂಥಾಲಯದ ಮುಖ್ಯ ಪಾಲಕ ಚಂದ್ರಕುಮಾರ್‌ ಶಾಸಕ ಎಚ್‌.ಕೆ. ಕುಮಾರಸ್ವಾಮಿರವರ ಜೊತೆ ನಿರಂತರ ಶ್ರಮ ಹಾಕಿ ಸುಮಾರು 30 ಲಕ್ಷ ರೂ. ಅನುದಾನವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಬಿಡುಗಡೆ ಮಾಡಿಸಿದ್ದರು.

ಇದೀಗ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು 30 ಲಕ್ಷ ರೂ. ಅನುದಾನ ಸಿದ್ಧವಿದೆ. ಆದರೆ ಲೋಕೋಪಯೋಗಿ ಇಲಾಖೆಯವರು ಇದೀಗ ನಾವು ಸಂಪೂರ್ಣ ಜಾಗ ಬಿಟ್ಟುಕೊಡುವುದಿಲ್ಲ, ಅರ್ಧ ಜಾಗ ಮಾತ್ರ ಬಿಟ್ಟು ಕೊಡುತ್ತೇವೆ ಎನ್ನುತ್ತಿದ್ದು ಇದರಿಂದ ಬಂದಿರುವ ಹಣ ಹಿಂತಿರುಗಿ ಹೋಗುವ ಸಾಧ್ಯತೆಗಳಿದೆ....

ಫೋಟೋ - http://v.duta.us/nqrcJAEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/opiQWQAA

📲 Get Hassan News on Whatsapp 💬