ಬೋರ್‌ವೆಲ್‌ ತಡೆಗೋಡೆ ಪರಿಶೀಲನೆ

  |   Kolar-Karnatakanews

ಕೋಲಾರ: ಕೆ.ಸಿ. ವ್ಯಾಲಿ ಯೋಜನೆಯ ನೀರು ನಗರ ಹೊರವಲಯದ ಮಡೇರಹಳ್ಳಿ ಕೆರೆಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನಗರಸಭೆಗೆ ಸೇರಿದ ಅಲ್ಲಿನ ಕೊಳವೆ ಬಾವಿಗಳಿಗೆ ನೇರವಾಗಿ ಕೆಸಿವ್ಯಾಲಿ ನೀರು ಸೇರದಂತೆ ನಗರಸಭೆಯಿಂದ ತಡೆಗೋಡೆ ನಿರ್ಮಿಸಲಾಗುತ್ತಿದ್ದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಭೇಟಿ ನೀಡಿ ಪರಿಶೀಲಿಸಿದರು.

ಕೋಲಾರ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಮಡೇರಹಳ್ಳಿ, ಅಮ್ಮೇ ರಹಳ್ಳಿ ಹಾಗೂ ಕೋಲಾರಮ್ಮ ಕೆರೆಗೆ ಭೇಟಿ ನೀಡಿದ್ದರು. ಈ ಕೆರೆಗಳಿಂದಲೇ ನಗರಕ್ಕೆ ನೀರು ಸರಬರಾಜಾಗುತ್ತಿರುವುದರಿಂದ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಬೋರ್‌ವೆಲ್‌ಗ‌ಳ ಸುತ್ತಲೂ ತಡೆ ಗೋಡೆ ನಿರ್ಮಿಸ ಲಾಗುತ್ತಿದ್ದು, ಅವುಗಳ ಕಾಮಗಾರಿ ಪರಿಶೀಲಿಸಿದರು.

ಬೋರ್‌ವೆಲ್‌ಗೆ ನೇರವಾಗಿ ನೀರು ಸೇರಲ್ಲ: ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಕೆಸಿ ವ್ಯಾಲಿ ನೀರು ಮಡೇರಹಳ್ಳಿ ಕೆರೆಗೂ ಬರುತ್ತಿದೆ. ನಗರಸಭೆಗೆ ಪ್ರಮುಖ ವಾಗಿ ಮಡೇರಹಳ್ಳಿ, ಅಮ್ಮೇರಹಳ್ಳಿ, ಕೋಲಾ ರಮ್ಮ ಕೆರೆಯಲ್ಲಿ ಬೋರ್‌ವೆಲ್‌ಗ‌ಳಿವೆ. ಬೋರ್‌ವೆಲ್‌ಗ‌ಳಿಗೆ ನೇರವಾಗಿ ಕೆಸಿ ವ್ಯಾಲಿ ನೀರು ಹರಿಯದಂತೆ ಕ್ರಮವಹಿಸಿ ನಗರಸಭೆಯಿಂದ ಬೋರ್‌ವೆಲ್‌ಗ‌ಳಿಗೆ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

8 ಬೋರ್‌ವೆಲ್‌ಗ‌ಳು ಕಾರ್ಯನಿರ್ವಹಣೆ: ಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋರ್‌ ವೆಲ್‌ಗ‌ಳಿಗೆ ಇದೀಗ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೆರೆಯಂಗಳದಲ್ಲಿರುವ ಕೊಳವೆಬಾವಿ ಗಳನ್ನೂ ಸ್ಥಳಾಂತರಿಸಲಾಗುವುದು. ಸದ್ಯ ಮಡೇರಹಳ್ಳಿ ಕೆರೆಯಲ್ಲಿ 8 ಬೋರ್‌ ವೆಲ್‌ಗ‌ಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಗೆ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದರು....

ಫೋಟೋ - http://v.duta.us/-pAxQQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/lJbEngAA

📲 Get Kolar Karnataka News on Whatsapp 💬