ಮಳೆ ನೀರಿನ ಕೊಯ್ಲು ಅನಿವಾರ್ಯ: ಡಿಸಿ ಜಗದೀಶ್‌

  |   Udupinews

ಬ್ರಹ್ಮಾವರ: ಯುವಕರು ಕಡಿಮೆ ಅಂದರೂ ವರ್ಷಕ್ಕೆ 5 ಗಿಡಗಳನ್ನಾದರೂ ನೆಟ್ಟು ಅವುಗಳ ಪೋಷಣೆ ಮಾಡುವುದು ಇಂದು ಅನಿವಾರ್ಯವಾಗಿದೆ. ಹೀಗೆ ಮಾಡುವುದರಿಂದ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮಿಂದಲೇ ನಾಶವಾಗುತ್ತಿರುವ ಕಾಡನ್ನು ಪುನರ್‌ ರಚಿಸಲು ಮಹತ್ವದ ಹೆಜ್ಜೆಯನ್ನು ಇಟ್ಟಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

ಅವರು ಜಿಲ್ಲಾ ಆಡಳಿತ ಮತ್ತು ಜಿ.ಪಂ., ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜು, ಮಿಲಾಗ್ರಿಸ್‌ ಪ.ಪೂ. ಕಾಲೇಜು, ಬೈಂದೂರು ಗಂಗನಾಡು ಯುವಕ ವೃಂದದ ಸಹಯೋಗದಲ್ಲಿ ಉಡುಪಿ ನೆಹರೂ ಯುವ ಕೇಂದ್ರದವರು ಮಿಲಾಗ್ರಿಸ್‌ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಮಳೆ ನೀರಿನ ಕೊಯ್ಲು ಮತ್ತು ನೀರಿನ ಸಂರಕ್ಷಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು, ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಎಂಬ ವಿಷಯಗಳ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಮಾಡಿ ಅದರಿಂದ ಉತ್ಪತ್ತಿಯಾದ ಸಾವಯವ ಗೊಬ್ಬರವನ್ನು ತಮ್ಮ ಮನೆಯ ಕೈ ತೋಟಕ್ಕೆ, ಗಿಡ ಮರಗಳಿಗೆ ಉಪಯೋಗಿಸಬಹುದು ಎಂದರು.

ತಮ್ಮ ಮನೆಯ ಹಸಿ ಕಸವನ್ನು ತಮ್ಮ ಮನೆಯಲ್ಲಿಯೇ ಸಮರ್ಪಕವಾಗಿ ವಿಲೇವಾರಿ ಮಾಡುವ ವಿಧಾನವನ್ನು ಅಳವಡಿಸಿಕೊಂಡಿದ್ದು, ಸಾರ್ವಜನಿಕರು ವೀಕ್ಷಿಸಬಹುದು ಎಂದು ಜಿಲ್ಲಾಧಿ ಕಾರಿ ತಿಳಿಸಿದರು....

ಫೋಟೋ - http://v.duta.us/2RW_cAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/IXZ6OwAA

📲 Get Udupi News on Whatsapp 💬