ರಾಜ್ಯದ ಶಾಲೆಗಳಲ್ಲಿ ಮೊಳಗಲಿದೆ "ವಾಟರ್‌ ಬೆಲ್‌"

  |   Dakshina-Kannadanews

ಮಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಇನ್ನು ಮುಂದೆ ಪ್ರತಿ ತರಗತಿ ಮುಗಿದಾಕ್ಷಣ ಕೇಳುವ ಗಂಟೆಯ ಸದ್ದಿನೊಂದಿಗೆ ವಾಟರ್‌ ಬೆಲ್‌ ಕೂಡ ಮೊಳಗಲಿದೆ. ಆ ಮೂಲಕ ಕೇರಳ ಮಾದರಿಯಲ್ಲಿ ರಾಜ್ಯದ ಶಾಲೆಗಳಲ್ಲೂ ನೀರು ಕುಡಿಯಲೆಂದೇ ಮಕ್ಕಳಿಗೆ ಸಮಯ ನಿಗದಿಪಡಿಸಲು ರಾಜ್ಯ ಸರಕಾರ ಮುಂದಾಗಿದೆ.

ದಿನಕ್ಕೆ ಕನಿಷ್ಠ ಮೂರ್‍ನಾಲ್ಕು ಲೀಟರ್‌ ನೀರು ಮನುಷ್ಯನ ದೇಹಕ್ಕೆ ಅಗತ್ಯ. ಆದರೆ ನಿರ್ಲಕ್ಷe, ಅತಿಯಾದ ಒತ್ತಡಗಳಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದನ್ನೇ ಜನ ಮರೆಯುತ್ತಾರೆ. ಪರಿಣಾಮ ದೇಹದಲ್ಲಿ ನೀರಿನ ಕೊರತೆಯಾಗಿ ಉರಿಮೂತ್ರ, ಉಷ್ಣದಂತಹ ಹಲವಾರು ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ.

ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿ ಗಳು ಇಂತಹ ಸಮಸ್ಯೆಗಳಿಂದ ಮುಕ್ತರಾಗಬೇಕೆಂಬ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಶಿಕ್ಷಣ ಸಚಿವರು, ಮಕ್ಕಳಿಗೆ ಶಾಲೆಗಳಲ್ಲಿ ನೀರು ಕುಡಿಯಲೆಂದೇ ಸಮಯ ನಿಗದಿಪಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಕಾರ್ಯಯೋಜನೆ ರೂಪಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

ಮೊಳಗಲಿದೆ ವಾಟರ್‌ ಬೆಲ್‌

ಮಧ್ಯಾಹ್ನದ ಬಿಸಿಯೂಟಕ್ಕೆ ಒಂದಷ್ಟು ಹೊತ್ತು ಸಮಯ ಇರುವಂತೆಯೇ ನೀರು ಕುಡಿಯಲೆಂದೇ ದಿನದಲ್ಲಿ ಮೂರು ಬಾರಿ ವಿರಾಮ ಇರುತ್ತದೆ. ಮೂರು ಬಾರಿಯೂ ಗಂಟೆ ಬಾರಿಸಿ ನೀರು ಕುಡಿಯುವಂತೆ ಮಕ್ಕಳನ್ನು ಎಚ್ಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಸಾಕಷ್ಟು ನೀರು ಕುಡಿದು ನಿಗದಿತ ಸಮಯದೊಳಗೆ ತರಗತಿಯೊಳಗೆ ಹೋಗಬೇಕು. ಎಲ್ಲ ಮಕ್ಕಳಿಗೂ ಬಾಟಲ್‌ ನೀರು ತರಲು ಸಾಧ್ಯವಾಗುವುದಿಲ್ಲ ಮತ್ತು ತಂದರೂ ಚಿಕ್ಕ ಬಾಟಲ್‌ನಲ್ಲಿರುವ ನೀರು ಸಾಕಾಗುವುದಿಲ್ಲ. ಅದಕ್ಕಾಗಿ ಶಾಲೆಗಳಲ್ಲೇ ಶುದ್ಧ ನೀರನ್ನು ಕುಡಿಯ ಬೇಕೆಂಬ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ. ದಿನದ ಯಾವ ಸಮಯದಲ್ಲಿ ವಾಟರ್‌ ಬೆಲ್‌ ಬಾರಿಸಬೇಕೆಂಬ ಬಗ್ಗೆ ಇನ್ನಷ್ಟೇ ಅಧಿಕಾರಿ ಗಳು ಯೋಜಿಸಬೇಕಿದೆ....

ಫೋಟೋ - http://v.duta.us/EeVJMAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/2sSFswAA

📲 Get Dakshina Kannada News on Whatsapp 💬