ವ್ಯಾಪಾರಿಗಳಿಗೆ ಸುಲಭವಾಗಿ ಸಿಗುತ್ತಿದೆ ಪ್ಲಾಸ್ಟಿಕ್‌

  |   Mysorenews

ಹುಣಸೂರು: ನಗರದಲ್ಲಿ ಪ್ರತಿದಿನ 20 ಟನ್‌ ಕಸದೊಂದಿಗೆ 200 ಕೇಜಿ ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ. ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾತ್ರ ನಿಂತಿಲ್ಲ. ಅಂಗಡಿಗಳ ಮೇಲೆ ಅಧಿಕಾರಿಗಳು ನಿರಂತರ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡು, ದಂಡ ವಿಧಿಸುತ್ತಿದ್ದಾರೆ. ಆದರೆ, ವರ್ತಕರು, ಏಜೆಂಟ್‌ಗಳು ಕದ್ದುಮುಚ್ಚಿ ಪ್ಲಾಸ್ಟಿಕ್‌ ದಾಸ್ತಾನು ಮಾಡಿ, ದಿನಸಿ, ತರಕಾರಿ, ಹೋಟೆಲ್‌, ಬೀದಿ ಬದಿ ಅಂಗಡಿಗಳಿಗೆ ಮಾರುತ್ತಿದ್ದಾರೆ.

ಮರುಬಳಕೆ: ನಗರದಲ್ಲಿ ಪ್ರತಿದಿನ ಕಸದೊಂದಿಗೆ 200 ಕೆ.ಜಿ. ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ. 2 ಸಾವಿರ ಕ್ವಿಂಟಲ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಟ್ರೀಟ್‌ಮೆಂಟ್‌ ಪ್ಲಾಂಟ್‌ನಲ್ಲಿ ಇದನ್ನು ಪ್ರತ್ಯೇಕಿಸಿ, ವಿವಿಧ ಬಗೆಯ ಪ್ಲಾಸ್ಟಿಕ್‌ಗಳನ್ನು ವಿಂಗಡಿಸಲಾಗುತ್ತಿದೆ. ಈ ಪ್ಲಾಸ್ಟಿಕ್‌ಗಳನ್ನು ಪ್ರತಿ ತಿಂಗಳು ಮರು ಬಳಕೆ ಮಾಡುವ ಘಟಕಗಳಿಗೆ ನೀಡಲಾಗುತ್ತದೆ.

ಬೀದಿ ಬದಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿಗಳು, ತರಕಾರಿ ಗಾಡಿಗಳು, ಹೋಟೆಲ್‌ಗ‌ಳು, ಬೇಕರಿ, ಮಾಂಸದ ಅಂಗಡಿ ಮತ್ತಿತರ ಅಂಗಡಿಗಳಲ್ಲಿ ಎಗ್ಗಿಲ್ಲದೇ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪ್ಲಾಸ್ಟಿಕ್‌ ಕಾಫಿ, ಟೀ ಲೋಟ, ಪ್ಲಾಸ್ಟಿಕ್‌ ನೀರಿನ ಬಾಟಲಿ ಮತ್ತಿತರ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ. ಮೊದಲು ಪ್ಲಾಸ್ಟಿಕ್‌ ತಯಾರಿಕಾ ಘಟಕಗಳನ್ನೇ ಮುಚ್ಚಿಸಬೇಕು. ಸ್ಥಳೀಯ ಸಂಸ್ಥೆಗಳಿಗೂ ಕಠಿಣ ಕ್ರಮ ಕೈಗೊಳ್ಳಲು ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಸಾಧ್ಯವಾಗಲಿದೆ ಎನುತ್ತಾರೆ ಸೇವ್‌ ಅವರ್‌ ಅರ್ಥ್ ಕ್ಲಬ್‌ ಅಧ್ಯಕ್ಷ ಸಂಜಯ್‌....

ಫೋಟೋ - http://v.duta.us/dzb5VAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Lkt6igAA

📲 Get Mysore News on Whatsapp 💬