ಶೃಂಗೇರಿಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

  |   Shimoganews

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಮಂಗಳವಾರ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮದಿಂದ ನೆರವೇರಿತು. ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶ್ರೀಮಠದಿಂದ ಮುಖ್ಯ ಬೀದಿಯಲ್ಲಿ ಕಾಲ್ನಡಿಗೆಯಲ್ಲೇ ಬೆಟ್ಟಕ್ಕೆ ತೆರಳಿ ಶ್ರೀ ಮಲಹಾನಿಕರೇಶ್ವರ ದೇವಾಲಯದಲ್ಲಿ ಮೊದಲ ದೀಪ ಬೆಳಗುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.

ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಶ್ರೀಮಠದಿಂದ ಬೆಟ್ಟದವರೆಗಿನ ಎಲ್ಲೆಡೆ ದೀಪ ಬೆಳಗಿದವು. ಶ್ರೀ ಮಠದ ಆವರಣದಲ್ಲಿ ಹರಿಹರಪುರದ ಸುವರ್ಣ ಕೇಶವ ಹಾಕಿದ್ದ ಬೃಹತ್‌ ರಂಗೋಲಿ ಆಕರ್ಷಕವಾಗಿತ್ತು. ರಸ್ತೆಯುದ್ದಗಲಕ್ಕೂ ರಂಗೋಲಿ ಚಿತ್ತಾರಗಳು ಕಣ್ಮನ ಸೆಳೆದವು. ಮಲ್ಲಪ್ಪ ಬೀದಿಯನ್ನು ವಾಹನ ಚಾಲಕರ ಸಂಘದವರು ತಳಿರು ತೋರಣಗಳಿಂದ ಅಲಂಕರಿಸಿದ್ದರು.

ತಾಲೂಕಿನ ಶಾಲಾ-ಕಾಲೇಜು ವಿದ್ಯಾಥಿಗಳು ಹಾಗೂ ಭಕ್ತಾದಿಗಳು ಶ್ರೀಮಠ ಹಾಗೂ ಮುಖ್ಯ ಬೀದಿಯಲ್ಲಿ ಹಣತೆಯಿಟ್ಟು ದೀಪ ಹಚ್ಚಿ ದೀಪೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು. ಶ್ರೀಮಠದಲ್ಲಿ ಶ್ರೀ ಶಾರದಾಂಬ ಬಂಗಾರ ರಥೋತ್ಸವ, ಮಹಾ ಮಂಗಳಾರತಿ, ಅಷ್ಟಾವಧಾನ ಸೇವೆಗಳ ಬಳಿಕ ಶ್ರೀ ಶಾರದಾಂಬೆ, ಶ್ರೀ ಭವಾನಿಯಮ್ಮ, ಶ್ರೀಮಲಹಾನಿಕರೇಶ್ವರ ಸ್ವಾಮಿ, ಶ್ರೀ ವಿದ್ಯಾಶಂಕರ, ಶ್ರೀ ಶಂಕರಾಚಾರ್ಯರು ಪಂಚದೇವರಿಗೆ ತುಂಗಾ ನದಿಯಲ್ಲಿ ನಡೆದ ತೆಪ್ಪೋತ್ಸವದಲ್ಲಿ ಶ್ರೀಮಠದ ಪುರೋಹಿತರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು....

ಫೋಟೋ - http://v.duta.us/ziSf_wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/5vdXrgAA

📲 Get Shimoga News on Whatsapp 💬