ಸಂತೋಷ್‌ ಭೇಟಿಯಾದ ಅನರ್ಹ ಶಾಸಕರು

  |   Karnatakanews

ಬೆಂಗಳೂರು: ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುತ್ತಿದ್ದಂತೆ ಬಹುತೇಕ ಅನರ್ಹ ಶಾಸಕರು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿ ಹಲವು ವಿಚಾರಗಳ ಬಗ್ಗೆ ಖಾತರಿಪಡಿಸಿಕೊಂಡರು.

ಪಕ್ಷ ಸೇರ್ಪಡೆ, ಟಿಕೆಟ್‌ ಖಾತರಿ, ಬಂಡಾಯ ಉಪಶಮನ, ಕುಟುಂಬದವರಿಗೆ ಟಿಕೆಟ್‌ ಇತರೆ ವಿಚಾರಗಳ ಬಗ್ಗೆ ಸಂತೋಷ್‌ ಅವರೊಂದಿಗೆ ಮುಕ್ತವಾಗಿ ಚರ್ಚಿಸಿ ಖಾತರಿಪಡಿಸಿಕೊಂಡರು. ಪಕ್ಷ ಸೇರ್ಪಡೆ, ಟಿಕೆಟ್‌ ಖಾತರಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಮಾತ್ರವಲ್ಲದೆ, ಪಕ್ಷದ ವರಿಷ್ಠರ ಸಹಮತದ ಬಗ್ಗೆ ಖಾತರಿ ಪಡೆದುಕೊಳ್ಳಲು ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಕೆಲವರಲ್ಲಿ ಅಸಮಾಧಾನ: ಸುಪ್ರೀಂ ಕೋರ್ಟ್‌ ತೀರ್ಪು ತಮ್ಮ ಪರವಾಗಿ ಬರುವ ನಿರೀಕ್ಷೆ ಅನರ್ಹ ಶಾಸಕರಲ್ಲಿತ್ತು. ಸ್ಪೀಕರ್‌ ಆದೇಶವನ್ನು ಮರುಶೀಲಿಸುವಂತೆ ನ್ಯಾಯಾಲಯ ತೀರ್ಪು ನೀಡುವ ನಿರೀಕ್ಷೆ ಹಲವು ಅನರ್ಹ ಶಾಸಕರಲ್ಲಿತ್ತು. ಒಂದೊಮ್ಮೆ ತೀರ್ಪು ಆ ರೀತಿ ಬಂದಿದ್ದರೆ ರಾಜೀನಾಮೆ ಅಂಗೀಕಾರವಾಗಿ ಅನರ್ಹತೆಯ ಕಳಂಕ ಕಳಚುತ್ತಿತ್ತು. ನಂತರ ಸಚಿವರಾಗಿ ಆ ಮೇಲೆ ಉಪಚುನಾವಣೆ ಎದುರಿಸುವ ಲೆಕ್ಕಾಚಾರದಲ್ಲಿದ್ದರು. ಆದರೆ ಸುಪ್ರೀಂ ಕೋರ್ಟ್‌ ಅನರ್ಹತೆಯನ್ನು ಎತ್ತಿ ಹಿಡಿದು, ಚುನಾವಣಾ ಸ್ಪರ್ಧೆಯ ನಿರ್ಬಂಧ ಸಡಿಲಿಸಿದೆ. ಇದು ಕೆಲ ಅನರ್ಹರಲ್ಲಿ ಬೇಸರ ಮೂಡಿಸಿದ್ದರೂ ಆ ಬಗ್ಗೆ ಹೆಚ್ಚಾಗಿ ತೋರ್ಪಡಿಸಿಕೊಳ್ಳಲಿಲ್ಲ....

ಫೋಟೋ - http://v.duta.us/_4ZergAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/SB-AjwAA

📲 Get Karnatakanews on Whatsapp 💬