ಸಂವಿಧಾನಕ್ಕೆ ಅಗೌರವ ; ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಅಮಾನತು

  |   Karnatakanews

ಬೆಂಗಳೂರು: ಸಂವಿಧಾನ ದಿನದ ಆಚರಣೆಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಕೈಪಿಡಿಯನ್ನು ಪರಾಮರ್ಶಿಸದೆ ಶಿಕ್ಷಣ ಇಲಾಖೆಯ ವೆಬ್ ಸೈಟ್ಗೆ ಅಪಲೋಡ್ ಮಾಡಿ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ತಂದ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ನಿರ್ದೇಶಕ ಶ್ರೀಮಣಿ ಮತ್ತು ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸುರೇಶ್ ಕುಮಾರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಅಮಾನತು ಮಾಡಿದಲ್ಲದೇ ಇವರ ಮೇಲೆ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿಚಾರವನ್ನು ಆ ಕೈಪಿಡಿಯಲ್ಲಿ ಬರೆಯಲಾಗಿತ್ತು. ಕೋರಮಂಗಲದ ಸಿಎಂಸಿಎ ಎಂಬ ಖಾಸಗಿ ಸಂಸ್ಥೆ ಈ ಕೈಪಿಡಿ ತಯಾರಿಸಿತ್ತು. ಹಲವು ಜನರಿಂದ ಕೂಡಿದ್ದ ಸಂವಿಧಾನ ರಚನಾ ಸಭೆ ಎಂದು ಕರೆಯಲ್ಪಟ್ಟ ತಂಡದಿಂದ ಭಾರತೀಯ ಸಂವಿಧಾನವನ್ನು ರಚಿಸಲಾಗಿತ್ತು. ಆದರೆ ಈ ವಿಚಾರ ನಮ್ಮಲ್ಲಿ ಸಾಕಷ್ಟು ಜನರಿಗೆ ತಿಳಿದಿಲ್ಲ ಎಂದು ಉಲ್ಲೇಖಿಸಲಾಗಿದೆ.

ಮಾತ್ರವಲ್ಲದೇ ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ನಮ್ಮ ಸಂವಿಧಾನದ ಪಿತಾಮಹ ಎಂದು ಕರೆಯುತ್ತೇವೆ. ಆದರೆ ಹಲವು ಸಮಿತಿಗಳು ಬರೆದಂಥದ್ದನ್ನು ನೋಡಿ, ಅವುಗಳನ್ನು ಒಟ್ಟುಗೂಡಿಸಿ ನಮ್ಮ ಸಂವಿಧಾನದ ಅಂತಿಮ ಕರಡನ್ನು ತಯಾರಿಸುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಾರ್ಯವಾಗಿತ್ತು. ಅವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರಷ್ಟೇ ಎಂದು ಬರೆಯಲಾಗಿತ್ತು....

ಫೋಟೋ - http://v.duta.us/AJs6LwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/PyMcDgAA

📲 Get Karnatakanews on Whatsapp 💬