ಸಹಕಾರಿಗಳ ಪುನಶ್ಚೇತನಕ್ಕೆ ಬೇಕಿದೆ ಸಹಕಾರ

  |   Koppalnews

„ದತ್ತು ಕಮ್ಮಾರ

ಕೊಪ್ಪಳ: ಸಹಕಾರಿ ಕ್ಷೇತ್ರ ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿಯಾದಂತೆ ಎನ್ನುವ ಮಾತಿದೆ. ಆದರೆ ವಾಣಿಜ್ಯ ಬ್ಯಾಂಕ್‌ಗಳ ವಹಿವಾಟಿನ ಆರ್ಭಟ ಹಾಗೂ ತಾಂತ್ರಿಕತೆಯ ಕೊರತೆಯಿಂದ ಸಹಕಾರಿ ಬ್ಯಾಂಕ್‌ಗಳು ನರಳಾಡುತ್ತಿವೆ. ಜಿಲ್ಲೆಯಲ್ಲಿ ಒಟ್ಟು 766 ಸಹಕಾರಿ ಸಂಸ್ಥೆಗಳಿದ್ದು, 573 ಸಂಸ್ಥೆಗಳು ಮಾತ್ರ ತಮ್ಮ ಆರ್ಥಿಕತೆ ಸ್ಥಿರತೆ ಕಾಪಾಡಿಕೊಂಡಿವೆ.

ರೈತರ ಹಾಗೂ ಬ್ಯಾಂಕ್‌, ಸರ್ಕಾರದ ನಡುವೆ ಸಂಪರ್ಕದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಶೋಚನೀಯ ಸ್ಥಿತಿ ಎದುರಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ಕೆಲ ಸಹಕಾರಿ ಸಂಸ್ಥೆಗಳು ಆಧುನಿಕತೆಗೆ ತಕ್ಕಂತೆ ತಮ್ಮ ಕಾರ್ಯ ವಿಧಾನಗಳನ್ನು ಬದಲಾಯಿಸಿಕೊಂಡು ವಾಣಿಜ್ಯ ಬ್ಯಾಂಕ್‌ಗಳಿಗೂ ಪೈಪೋಟಿ ನೀಡುತ್ತಿರುವುದು ಗಮನಾರ್ಹ ಸಂಗತಿ. ಸ್ವಾತಂತ್ರ್ಯ ನಂತರದಲ್ಲಿ ಕೆಳ ಹಾಗೂ ಮಧ್ಯಮ ವರ್ಗದ ಜನತೆಗೆ ಈ ಸಹಕಾರಿ ಸಂಸ್ಥೆಗಳೇ ಆಧಾರವಾಗಿದ್ದವು.

ವಾಣಿಜ್ಯ ಬ್ಯಾಂಕ್‌ಗಳು ಎಂದರೆ ಶ್ರೀಮಂತರ ಸ್ವತ್ತು ಎನ್ನುವಂಥ ಸ್ಥಿತಿಯಿತ್ತು. ಜನರಲ್ಲಿ ಸಹಕಾರಿ ಮನೋಭಾವ, ಉಳಿತಾಯ ಯೋಜನೆಗಳಿಂದ ಜನರ ಭವಿಷ್ಯದ ಬದುಕು ಕಟ್ಟಿಕೊಳ್ಳಲು ತುಂಬಾಉಪಕಾರಿಯಾಗಿದ್ದವು. ಅಂತಹ ಸಹಕಾರಿ ಸಂಸ್ಥೆಗಳು ವಾಣಿಜ್ಯ ಬ್ಯಾಂಕ್‌ ಆರ್ಭಟಕ್ಕೆ ನಲುಗಿ ತಮ್ಮ ಕಾರ್ಯ ಚಟುವಟಿಕೆಯನ್ನೇ ನಿಲ್ಲಿಸುತ್ತಿವೆ....

ಫೋಟೋ - http://v.duta.us/Mczi5AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/vnzIbAAA

📲 Get Koppal News on Whatsapp 💬