ಹುಬ್ಬಳ್ಳಿ: ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ಕೇಟಿಂಗ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಬಾಲಕಿ

  |   Dharwadnews

ಹುಬ್ಬಳ್ಳಿ: ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ಕೇಟಿಂಗ್ ಮಾಡುವ ಮೂಲಕ 51.25 ಸೆಕೆಂಡ್ ಗಳಲ್ಲಿ 400 ಮೀಟರ್ ಕ್ರಮಿಸಿ ಓಜಲ್ ನಲವಡೆ (14) ಮೊದಲ‌ ಪ್ರಯತ್ನದಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ವಿಶೇಷವೆಂದರೇ ಪ್ರಪಂಚದಲ್ಲೇ ಸ್ಕೇಟಿಂಗ್ ನಲ್ಲಿ ದಾಖಲಾದ ಮೊದಲ ಗಿನ್ನಿಸ್ ರೆಕಾರ್ಡ್ ಇದಾಗಿದೆ.

ಬಾಲಕಿ ಓಜಲ್ ನಲವಡೆ, ಸುನಿಲ್ ನಲವಡೆ ಮತ್ತು ದೀಪಾ ನಲವಡೆ ದಂಪತಿಯ ಪುತ್ರಿ. ಹುಬ್ಬಳ್ಳಿಯ ಮಂಜುನಾಥೇಶ್ವರ ಕೇಂದ್ರೀಯ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದಾರೆ. ಕಳೆದ ಎಂಟು ತಿಂಗಳಿಂದ ಈ ದಾಖಲೆಗಾಗಿ ಸತತ ಅಭ್ಯಾಸ ಮಾಡುತ್ತಿದ್ದರು.

ಶಿರೂರ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಈ ವಿಶ್ವ ದಾಖಲೆ ಸ್ಪರ್ಧೆ ನಡೆದಿದೆ. ಬ್ರಿಟನ್ ನಿಂದ ಆಗಮಿಸಿರುವ ನಿರ್ಣಾಯಕ ವಿಕ್ಟರ್ ಫೆನಿಸ್ ಸಮಯ ಘೋಷಣೆ ಮಾಡಿದ್ದು ಬಾಲಕಿ ಓಜಲ್ ಮೂರನೇ ಪ್ರಯತ್ನದಲ್ಲಿ 51. 25 ಸೆಕೆಂಡ್ ಗಳಲ್ಲಿ 400 ಮೀಟರ್ ಕ್ರಮಿಸಿದ್ದಾರೆ. ಒಟ್ಟು ಮೂರು ಪ್ರಯತ್ನಗಳಲ್ಲಿ ನಡೆದಿತ್ತು. ಮೊದಲ ಪ್ರಯತ್ನ 48 ಸೆಕೆಂಡ್ ಮತ್ತು ಎರಡನೇ ಪ್ರಯತ್ನ ತಾಂತ್ರಿಕ ಕಾರಣದಿಂದಾಗಿ ರದ್ದಾಗಿತ್ತು

ಹೀಗಾಗಿ 51. 25 ಸೆಕೆಂಡ್ ವಿಶ್ವ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಈ ದಾಖಲೆಗೆ ಹುಬ್ಬಳ್ಳಿ ಜನತೆ ಸಾಕ್ಷಿಯಾಗಿದ್ದರು.

ಫೋಟೋ - http://v.duta.us/IpgQhQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-eC9GAAA

📲 Get Dharwad News on Whatsapp 💬