ಹುಲ್ಲು ಕಟಾವಿಗಾಗಿ ಯಂತ್ರ ಹಿಡಿದ ವಡಭಾಂಡೇಶ್ವರ ವಾರ್ಡ್‌ ಸದಸ್ಯ

  |   Udupinews

ಮಲ್ಪೆ: ಜನಪ್ರತಿನಿಧಿಗಳು ಅಂದ್ರೆ ಹೇಗಿರಬೇಕು ಎಂಬುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಇದೆ. ನಗರಸಭೆ ಸದಸ್ಯರೊಬ್ಬರು, ಆಡಳಿತ ವ್ಯವಸ್ಥೆಯಲ್ಲಿ ಸೂಕ್ತ ಸಮಯದಲ್ಲಿ ಕಾರ್ಮಿಕರು ಸಿಗದಿದ್ದಾಗ ಅವರನ್ನು ಕಾಯದೇ ಜನರ ಹಿತದೃಷ್ಟಿಯಿಂದ ಹುಲ್ಲು ಕತ್ತರಿಸುವ ಯಂತ್ರವನ್ನು ಹಿಡಿದು ವಾರ್ಡ್‌ನ ಸುತ್ತಮುತ್ತ ತಾವೇ ಖುದ್ದಾಗಿ ಹುಲ್ಲು ಕತ್ತರಿಸುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಡಭಾಂಡೇಶ್ವರ ವಾರ್ಡ್‌ನ ಸದಸ್ಯ ಯೋಗೀಶ್‌ ಸಾಲ್ಯಾನ್‌ ವಾರ್ಡ್‌ನ ನಿವಾಸಿಗಳ ಮೆಚ್ಚುಗೆ ಪಡೆದವರು. ನಗರಸಭೆಯ ವತಿಯಿಂದ ಪೌರ ಕಾರ್ಮಿಕರಿಂದ ನಡೆಯಬೇಕಾಗಿದ್ದ ವಾರ್ಡ್‌ನ ಎಲ್ಲ ರಸ್ತೆಗಳ ಕೆಲಸವನ್ನು ತನ್ನ ಬಿಡುವಿನ ಸಮಯದಲ್ಲಿ ಇದೀಗ ತಾವೇ ನಿರ್ವಹಿಸುತ್ತಿದ್ದಾರೆ.

ವಾರ್ಡ್‌ನ ಕೆಲವೊಂದು ಭಾಗದಲ್ಲಿ ಆಳೆತ್ತರಕ್ಕೆ ಹುಲ್ಲುಗಳು ಬೆಳೆದಿವೆ. ಇದು ವಾಹನ ಸವಾರರಿಗೆ ಮುಂದೆ ಬರುವ ವಾಹನಗಳು ಕಾಣಿಸದೆ ಎಷ್ಟೋ ಸಲ ಅಪಘಾತಗಳಿಗೂ ಕಾರಣವಾಗುತ್ತಿದೆ. ಈ ಬಗ್ಗೆ ದಿನನಿತ್ಯ ನಾಗರಿಕರು ವಾರ್ಡ್‌ ಸದಸ್ಯ ಯೋಗೀಶ್‌ ಅವರಲ್ಲಿ ದೂರು ನೀಡುತ್ತಿದ್ದರು. ಆದರೆ ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಂದಾಗಿ ವಾರಕ್ಕೆ ಒಂದು (ಸೋಮವಾರ) ದಿನ ಮಾತ್ರ ಕಾರ್ಯ ನಡೆಯುತ್ತಿತ್ತು. ಅದು ಕೆಲವೇ ಗಂಟೆಗಳು ಮಾತ್ರವಾಗಿತ್ತು....

ಫೋಟೋ - http://v.duta.us/Ip6s6gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ooB56QAA

📲 Get Udupi News on Whatsapp 💬