1ನೇ ತರಗತಿಗೆ ಆಂಗ್ಲ ಮಾಧ್ಯಮ: ಶಾಲೆಗಳ ಸಂಖ್ಯೆ ಹೆಚ್ಚಳ ಇಲ್ಲ

  |   Dakshina-Kannadanews

ಮಂಗಳೂರು: ಒಂದನೇ ತರಗತಿಯಲ್ಲಿ ಆಂಗ್ಲ ಶಿಕ್ಷಣ ಬೋಧನೆಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಸಂಖ್ಯೆ ಏರಿಕೆ ಮಾಡುವ ಉದ್ದೇಶ ಸರಕಾರದ ಮುಂದಿಲ್ಲ. ಹಾಗಾಗಿ ಈ ಬಾರಿಯಂತೆ ಮುಂದಿನ ವರ್ಷವೂ 1,000 ಸರಕಾರಿ ಶಾಲೆಗಳಲ್ಲಷ್ಟೇ 1ನೇ ತರಗತಿ ಆಂಗ್ಲ ಶಿಕ್ಷಣ ಮುಂದುವರಿಯಲಿದೆ.

ಸರಕಾರಿ ಶಾಲೆಗಳಲ್ಲಿ ಪರಿಣಾಮಕಾರಿ ಶಿಕ್ಷಣ ಸಿಗಬೇಕು ಮತ್ತು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ರಾಜ್ಯ ಸರಕಾರವು 2019-20ನೇ ಸಾಲಿನಲ್ಲಿ ರಾಜ್ಯದ ಆಯ್ದ 1,000 ಶಾಲೆಗಳ 1ನೇ ತರಗತಿಗೆ ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಮಕ್ಕಳ ಸಂಖ್ಯೆಯನ್ನು 30ಕ್ಕೆ ನಿಗದಿಗೊಳಿಸಿದ ಹಿನ್ನೆಲೆಯಲ್ಲಿ ಆಂಗ್ಲ ಶಿಕ್ಷಣ ಅರಸಿ ಬಂದ ಬಹುತೇಕ ಹೆತ್ತವರಿಗೆ ನಿರಾಶೆಯಾಗಿತ್ತು. ಇದಕ್ಕಾಗಿ ಅದೇ ಶಾಲೆಗಳಲ್ಲಿ ನಲಿಕಲಿ ಶಿಕ್ಷಣದಲ್ಲಿಯೂ ಆಂಗ್ಲ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಇತರ ಶಾಲೆಗಳಲ್ಲಿಯೂ ಆಂಗ್ಲ ಶಿಕ್ಷಣ ಆರಂಭವಾಗಬಹುದು ಎಂದು ಪೋಷಕರೂ ಭಾವಿಸಿದ್ದರು. ಆದರೆ ಅಂತಹ ಯಾವುದೇ ನಿರ್ಧಾರವನ್ನು ಸರಕಾರ ಮಾಡಿಲ್ಲ.

"ಕಳೆದ ವರ್ಷ ಆಂಗ್ಲ ಶಿಕ್ಷಣ ಆರಂಭವಾದ 1,000 ಶಾಲೆಗಳಲ್ಲಿ ಯಥಾ ಪ್ರಕಾರ ಮುಂದುವರಿಯಲಿದೆ. ಹೊಸದಾಗಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಆರಂಭಿಸುವ ನಿರ್ಧಾರ ಸರಕಾರದ ಮುಂದಿಲ್ಲ....

ಫೋಟೋ - http://v.duta.us/6XWNgQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FruaXgAA

📲 Get Dakshina Kannada News on Whatsapp 💬