ಅಸಹಕಾರದಿಂದ ಸಹಕಾರಿ ರಂಗ ದುರ್ಬಲ

  |   Raichurnews

ಸಿದ್ಧಯ್ಯಸ್ವಾಮಿ ಕುಕನೂರು

ರಾಯಚೂರು: ಜನರ ಅಸಹಕಾರ, ತಿಳಿವಳಿಕೆ ಕೊರತೆ ಮಧ್ಯೆಯೂ ಜಿಲ್ಲೆಯಲ್ಲಿ ಸಹಕಾರಿ ವಲಯ ಬೆಳೆದು ಬಂದ ರೀತಿ ಅಚ್ಚರಿ ಮೂಡಿಸುತ್ತದೆ. ಸಹಕಾರಿ ಸಂಘಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಜಿಲ್ಲೆಯ ಜನ ಹಿಂದುಳಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಬೇರೆ ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದ್ದರೆ ಇಲ್ಲಿ ಮಾತ್ರ ಆಮೆ ವೇಗದಲ್ಲಿ ಸಾಗುತ್ತಿತ್ತು. ಅದರ ಮಧ್ಯೆಯೂ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಸೌಹರ್ದ ಸಹಕಾರದಂಥ ಸಂಘಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು ವಿಶೇಷ. ಜನ ಸಹಕಾರಿ ಸಂಘಗಳು, ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿದ್ದಾರಾದರೂ ಸಕಾಲಕ್ಕೆ ಮರುಪಾವತಿ ಮಾಡದ ಕಾರಣ ಅವು ದುರ್ಬಲಗೊಂಡಿವೆ. ಕೆಲವೊಂದು ಸ್ಥಗಿತಗೊಂಡರೆ ಸಾಕಷ್ಟು ಸಂಘ ಸಂಸ್ಥೆಗಳು ಮುಚ್ಚಿ ಹೋಗಿವೆ.

252 ಸಂಘಗಳು ನಿಷ್ಕ್ರಿàಯ: ಜಿಲ್ಲೆಯಲ್ಲಿ ಒಟ್ಟು 1,242 ಸಂಘಗಳು ನೋಂದಣಿಗೊಂಡಿದ್ದು, ಅದರಲ್ಲಿ ಈವರೆಗೆ 888 ಮಾತ್ರ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. 252 ಸಂಘಗಳು ನಿಷ್ಕ್ರಿàಯಗೊಂಡರೆ, 102 ಸಂಘಗಳು ಸಮಾಪನೆಗೊಂಡಿವೆ. ಅದರಲ್ಲಿ 478 ಸಂಘಗಳು ಲಾಭದಲ್ಲಿ ಕೆಲಸ ಮಾಡುತ್ತಿದ್ದರೆ, 596 ಸಂಘಗಳು ನಷ್ಟದಲ್ಲಿವೆ. ಕೇವಲ ಪರಿಶಿಷ್ಟ ಜಾತಿ, ಪಂಗಡದ ಜನರಿಗಾಗಿ-23, ಮಹಿಳೆಯರಿಗಾಗಿ 134, ಅಲ್ಪಸಂಖ್ಯಾತರಿಗಾಗಿ 18 ಸಂಘಗಳು ಶ್ರಮಿಸುತ್ತಿವೆ. ಅವುಗಳಲ್ಲಿ ಆರ್‌ಡಿಸಿಸಿ, ಕೃಷಿ ಪತ್ತಿನ ಸಹಕಾರ ಸಂಘಗಳು ಕೋಟಿ ವ್ಯವಹಾರದ ಗಡಿ ದಾಟಿದರೆ ಉಳಿದವು ಇನ್ನೂ ಲಕ್ಷದಲ್ಲೇ ಉಳಿದಿರುವುದು ವಿಪರ್ಯಾಸ....

ಫೋಟೋ - http://v.duta.us/RJI2zQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/SXy5xQAA

📲 Get Raichur News on Whatsapp 💬