ಆಯುಕ್ತರಿಂದ ನರೇಗಾ ಕಾಮಗಾರಿ ಪರಿವೀಕ್ಷಣೆ

  |   Bidarnews

ಬೀದರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಇಲಾಖೆಯ ಆಯುಕ್ತ ಅನಿರುದ್ಧ ಶ್ರವಣ್‌ ಪಿ. ಅವರು ಗುರುವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಜಿಲ್ಲೆಯಲ್ಲಿನ ಮಹಾತ್ಮಗಾಂಧಿ  ನರೇಗಾ ಯೋಜನೆ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು.

ನರೇಗಾ ಯೋಜನೆಯಡಿ ಅಂದಾಜು 8 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬಹಮನಿ ಅರಸರ ಕಾಲದ, ಅಷ್ಟೂರಿನ ಅಲ್ಲಮಪ್ರಭು ದೇವಾಲಯದ ಹತ್ತಿರದ ಪುರಾತನ ಕಲ್ಯಾಣಿಯ ಹೂಳೆತ್ತುವ ಮತ್ತು ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದರು. ಬಳಿಕ ಅಷ್ಟೂರ ಗ್ರಾಮದ ನರೇಗಾದ ನೋಂದಾಯಿತ ಕೂಲಿಕಾರ್ಮಿಕರೊಂದಿಗೆ ಮಾತನಾಡಿದರು. ಕೂಲಿ ಪಾವತಿ, ಹಾಜರಾತಿಯ ಬಗ್ಗೆ ಫಲಾನುಭವಿಗಳೊಂದಿಗೆ ಚರ್ಚಿಸಿದರು.

ಬಳಿಕ ಅದೇ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಯಿಂದ ಅಂದಾಜು 13.26 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಾಮೀಣ ಗೋದಾಮುಗೆ ಭೇಟಿ ನೀಡಿದರು. ಗೋದಾಮು ಸದ್ಬಳಕೆಯಾಗಬೇಕು. ಇದರ ಪ್ರಯೋಜನವು ಗ್ರಾಮದ ರೈತರಿಗೆ ಸಿಗಬೇಕು. ಅಂಗನವಾಡಿ ಮತ್ತು ಇನ್ನಿತರ ಇಲಾಖೆಗಳು ಕೇಳಿದಲ್ಲಿ ಅವರಿಗೂ ಕೂಡ ಆಹಾರ ಧಾನ್ಯಗಳನ್ನು ಇಟ್ಟುಕೊಳ್ಳಲು ಇಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯುಕ್ತರು ತಿಳಿಸಿದರು. ಬಳಿಕ ಗ್ರಾಮ ಪಂಚಾಯಿತಿಗೆ ತೆರಳಿ ರಾಜೀವಗಾಂ ಧಿ ಸೇವಾ ಕೇಂದ್ರದ ಕಟ್ಟಡ ವೀಕ್ಷಿಸಿ, ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು....

ಫೋಟೋ - http://v.duta.us/Jy5pzgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/H6wg6wAA

📲 Get Bidar News on Whatsapp 💬