ಆಯುಕ್ತರ ಕಚೇರಿಯಲ್ಲಿ ಮಕ್ಕಳ ಜಾತ್ರೆ

  |   Bangalore-Citynews

ಬೆಂಗಳೂರು: ಸದಾ ಪೊಲೀಸ್‌ ಬೂಟುಗಳ ಸದ್ದು ಕೇಳಿ ಬರುತ್ತಿದ್ದ ಸ್ಥಳದಲ್ಲಿ ಮಕ್ಕಳ ಕಲರವ... ಖಾಕಿಯ ಭಯವಿಲ್ಲದೆ ನಾನಾ ವೇಷದಲ್ಲಿ ಕುಣಿದು ಕಪ್ಪಳಿಸಿದ ಮಕ್ಕಳು... ಪುಟಾಣಿ ಪೊಲೀಸ್‌ ಅಧಿಕಾರಿಯಿಂದ ನಗರ ಪೊಲೀಸ್‌ ಆಯುಕ್ತರಿಗೆ ಸೆಲ್ಯೂಟ್‌... ಇವೆಲ್ಲ ಕಂಡು ಬಂದಿದ್ದು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ. ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ನಗರ ಪೊಲೀಸ್‌ ಮತ್ತು ಪರಿಹಾರ ತಂಡದ ಸಹಯೋಗದಲ್ಲಿ ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿ "ಮಕ್ಕಳ ಜಾತ್ರೆ' ಆಯೋಜಿಸಲಾಗಿತ್ತು.

ಜಾತ್ರೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆಯ ಮಕ್ಕಳು, ಟಿಪ್ಪು, ಗಾಂಧೀಜಿ, ಭಗತ್‌ ಸಿಂಗ್‌, ಸ್ವಾಮಿ ವಿವೇಕಾನಂದ, ರಾಣಿ ಚೆನ್ನಮ್ಮ, ಪೊಲೀಸ್‌ ಅಧಿಕಾರಿ, ಸೈನಿಕನ ವೇಷಧರಿಸಿ ಪೊಲೀಸ್‌ ಸಿಬ್ಬಂದಿಯಿಂದ ಮೆಚ್ಚುಗೆಗಳಿಸಿದರು. ಸ್ಕೆಟಿಂಗ್‌, ಜಾರುಬಂಡೆ ಸೇರಿ ನಾನಾ ಆಟಗಳಲ್ಲಿ ಪಾಲ್ಗೊಂಡು ಎಲ್ಲರನ್ನು ನಗಿಸಿದರು.

ಗ್ರಾಮೀಣ ಸೊಗಡು: ಪೊಲೀಸ್‌ ಆಯುಕ್ತರ ಕಚೇರಿ ಆವರಣವೇ ಗ್ರಾಮೀಣ ಸೊಗಡು ಹಾಗೂ ಜಾನಪದ ಕಲೆಗಳಿಂದ ತುಂಬಿಕೊಂಡಿತ್ತು. ಪರಿಹಾರ ಕೇಂದ್ರ ಹಾಗೂ ಆಯುಕ್ತರ ಕಚೇರಿ ಕಟ್ಟಡದ ಮುಂಭಾಗ ಹಸಿರು ತೋರಣಗಳಿಂದ ಕಂಗೊಳಿಸಿತ್ತು. ಕಾರ್ಯಕ್ರಮ ದಲ್ಲಿ ಜಾನಪದ ಕಲೆಗಳಿಗೂ ಆದ್ಯತೆ ನೀಡಲಾಗಿತ್ತು. ಮಕ್ಕಳೇ ವೀರಗಾಸೆ, ಬೊಂಬೆ ಕುಣಿತ ಸೇರಿ ನಾನಾ ಜಾನಪದ ಪ್ರಕಾರಗಳಿಗೆ ಹೆಜ್ಜೆ ಹಾಕಿ ಖುಷಿ  ಪಟ್ಟರು. ಅಲ್ಲದೇ, ಪೋಷಕರ ಜತೆ ಬಳೆ ವ್ಯಾಪಾರ,ರಾಗಿ ಕಣ ಹಾಗೂ ಮಿಠಾಯಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿದರು. ಐಸ್‌ ಕ್ಯಾಂಡಿ, ಬಾಂಬೆ ಮಿಠಾಯಿ ಸೇರಿ ಮುಂತಾದ ಸಿಹಿ ತಿನಿಸು ಸವಿದರು. ಗ್ರಾಮೀಣ ಸೊಗಡಿನ ಸೂಚಕವೆಂಬಂತೆ ನಾಲ್ಕೈದು ಗುಡಿಸಲು ಕೂಡ ಹಾಕಲಾಗಿತ್ತು....

ಫೋಟೋ - http://v.duta.us/QYhIJQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1HS7igAA

📲 Get Bangalore City News on Whatsapp 💬