ಆರ್ಥಿಕಾಭಿವೃದ್ಧಿಗೆ ಸಹಕಾರ ಸಂಘ ಸಹಕಾರಿ

  |   Shimoganews

ಭದ್ರಾವತಿ: ರೈತರಿಗೆ ನೀಡುವ ಆರ್ಥಿಕ ನೆರವಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಲಿಸಿದರೆ ಸಹಕಾರ ಸಂಘಗಳ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್‌ ಹೇಳಿದರು.

ಗುರುವಾರ ನ್ಯೂಟೌನ್‌ ಲಯನ್ಸ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಯೂನಿಯನ್‌ ಸಹಕಾರ ಕೇಂದ್ರ ಬ್ಯಾಂಕ್‌, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟ, ಸಹಕಾರ ಇಲಾಖೆ, ತಾಲೂಕಿನ ಎಲ್ಲಾ ಸಹಕಾರ ಬ್ಯಾಂಕ್‌ ಗಳ ಆಶ್ರಯದಲ್ಲಿ ನಡೆದ ಗ್ರಾಮೀಣ ಸಹಕಾರ ಸಂಸ್ಥೆಗಳ ಅನ್ವೇಷಣೆ 66 ನೇ ಅಖೀಲ ಭಾರತ ಸಹಕಾರ ಸಪ್ತಾಹ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಬ್ಯಾಂಕ್‌ಗಳು ಹೆಸರಿಗೆ ತಕ್ಕಂತೆ ಬಡವರಿಗೆ ಆರ್ಥಿಕ ಸಹಕಾರವನ್ನು ಸಾಲದ ರೂಪದಲ್ಲಿ ನೀಡುವ ಮೂಲಕ ಬಡ ಮತ್ತು ಮದ್ಯಮ ವರ್ಗದ ಜನರ ಕಾಮಧೇನು, ಕಲ್ಪವೃಕ್ಷ ಎಂಬ ರೀತಿಯಲ್ಲಿ ನೆರವು ನೀಡುತ್ತಿವೆ. ಸಾಲ ಪಡೆದವರು ಕಾಲಕ್ಕೆ ಸರಿಯಾಗಿ ಸಾಲವನ್ನು ಮರು ಪಾವತಿಸಿದರೆ ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿ ಉತ್ತಮ ಗೊಳ್ಳುವುದರ ಜೊತೆಗೆ ಇನ್ನೂ ಹೆಚ್ಚಿನ ಜನರು ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ನೆರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು....

ಫೋಟೋ - http://v.duta.us/iLZcwgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/477aawAA

📲 Get Shimoga News on Whatsapp 💬