ಇದ್ದೂ ಇಲ್ಲದಂತಾದ ಗ್ರಂಥಾಲಯ

  |   Gadagnews

ರೋಣ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಂತ ಕಟ್ಟಡದಲ್ಲಿ 40 ವರ್ಷಗಳಿಂದ ನಡೆಯುತ್ತಿರುವ ಗ್ರಂಥಾಲಯಕ್ಕೆ ಗ್ರಂಥಾಲಯ ಸಹಾಯಕರಿಲ್ಲದೆ ಓದುಗರಿಗೆ ಸಕಾಲಕ್ಕೆ ದೊರೆಯದೆ ಪಟ್ಟಣ ಹಾಗೂ ಸುತ್ತಮುತ್ತಲಿನ ಜನರಿಗೆ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ.

ಪುಸ್ತಕಗಳ ಭಂಡಾರವಿದೆ: ಪಟ್ಟಣದ ಹೃದಯ ಭಾಗದಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಹೊಸದಾಗಿ ಸಾವಿರಾರು ಪುಸ್ತಕಗಳು ಬಂದಿವೆ. ಅವುಗಳನ್ನು ದಾಖಲಿಸಿಕೊಂಡು ಓದುಗರಿಗೆ ಕೊಡಬೇಕಾದ ಗ್ರಂಥಾಲಯ ಸಹಾಯಕರಿಲ್ಲದೆ, ಸರ್ಕಾರದಿಂದ ಬಂದಿರುವ ಪುಸ್ತಕಗಳು ಅನಾಥವಾಗಿವೆ. ಇತ್ತ ಓದುಗರಿಗೆ ತಮಗೆ ಓದಬೇಕೆನಿಸುವ ಪುಸ್ತಕಗಳನ್ನು ಕೊಂಡೊಯ್ಯಲ್ಲ ಸಾಧ್ಯವಾಗದೆ ನಿರಾಸೆಯಿಂದ ಮನೆಗೆ ಹಿಂದಿರುಗುತ್ತಿದ್ದಾರೆ.

2002ರಲ್ಲೇ ಸ್ವಂತ ಕಟ್ಟಡ: ನಗರ ಗ್ರಂಥಾಲಯಕ್ಕೆ 2002ರಲ್ಲಿ ಅಂದಿನ ಶಾಸಕ ಜಿ.ಎಸ್‌.ಪಾಟೀಲ ಹಾಗೂ ಸಂಸದ ಆರ್‌.ಎಸ್‌.ಪಾಟೀಲರ ಅನುದಾನದಲ್ಲಿ ಒಂದು ಮಹಡಿ ಹೊಂದಿರುವ ಸುವ್ಯಸ್ಥಿತ ಕಟ್ಟಡವನ್ನು ಭೂ ಸೇನಾ ನಿಗಮದಿಂದ ನಿರ್ಮಿಸಲಾಗಿದೆ. ಸುಂದರ ವಾತಾವರಣ, ಶಾಂತ ಪ್ರದೇಶ, ಉತ್ತಮ ಗಾಳಿ, ಬೆಳಕು, ಆಸನಗಳ ವ್ಯವಸ್ಥೆ ಇದ್ದರೂ ಸೂಕ್ತ ನಿರ್ವಹಣೆಯಿಲ್ಲದೇ ಗ್ರಂಥಾಲಯ ನರಳುತ್ತಿದೆ. ಬೆಳಗ್ಗೆ 8 ಗಂಟೆಗೆ ಗ್ರಂಥಾಲಯ ಆರಂಭಿಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಓದುಗರನ್ನು ಹೊಂದಿರುವ ಗ್ರಂಥಾಲಯಕ್ಕೆ ಒಬ್ಬ ಕಾಯಂ ಗ್ರಂಥಪಾಲಕ ಇಲ್ಲದೆ ಇರುವುದು ಇಲ್ಲಿ ದೊಡ್ಡ ಸಮಸ್ಯೆಯಾಗಿದೆ....

ಫೋಟೋ - http://v.duta.us/6yS6EQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/2eHIaAAA

📲 Get Gadag News on Whatsapp 💬