ಇಂದು ಯೋಗಗುರು ಬಾಬಾ ರಾಮದೇವ್‌ ಉಡುಪಿಗೆ

  |   Udupinews

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ನ. 16ರಿಂದ 20ರ ವರೆಗೆ ನಡೆಯುವ ಐದು ದಿನಗಳ ಬೃಹತ್‌ ಯೋಗ ಚಿಕಿತ್ಸೆ ಮತ್ತು ಯೋಗ ಶಿಬಿರವನ್ನು ನಡೆಸಿಕೊಡುವ ಪ್ರಸಿದ್ಧ ಯೊಗಪಟು ಬಾಬಾ ರಾಮದೇವ್‌ ನ. 15ರ ಸಂಜೆ ಉಡುಪಿಗೆ ಆಗಮಿಸಲಿದ್ದಾರೆ.

ಮಂಗಳೂರಿಗೆ ವಿಮಾನದ ಮೂಲಕ ರಾಮದೇವ್‌ ಬರಲಿದ್ದಾರೆ. ಮಂಗಳೂರಿನಿಂದ ಉಡುಪಿಗೆ ರಸ್ತೆ ಮಾರ್ಗದಲ್ಲಿ ಬರುವ ರಾಮದೇವ್‌ ಅವರನ್ನು ಸಂಜೆ 5.30ಕ್ಕೆ ಕರಾವಳಿ ಬೈಪಾಸ್‌ ಬಳಿ ಸ್ವಾಗತಿಸಲಾಗುವುದು. ಕಲ್ಸಂಕದಿಂದ ಸುಮಾರು 5.45ಕ್ಕೆ ಬಡಗು ಪೇಟೆ ಮಾರ್ಗವಾಗಿ ಅವರನ್ನು ವೈಭವದ ಮೆರವಣಿಗೆಯಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆತರಲಾಗುವುದು. ದೇವರ ದರ್ಶನ ಬಳಿಕ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉಭಯ ಕುಶಲೋಪರಿ ನಡೆಸಲಿದ್ದಾರೆ.

ನ. 16ರಿಂದ 20ರ ವರೆಗೆ ಬೆಳಗ್ಗೆ 5ರಿಂದ 7.30 ಗಂಟೆಯ ವರೆಗೆ ಯೋಗ ಶಿಬಿರ ನಡೆಯಲಿದೆ. ಇದಕ್ಕಾಗಿ ಬೃಹತ್‌ ವೇದಿಕೆ ಮಂಗಳವಾರದಿಂದ ಸಿದ್ಧಗೊಳ್ಳುತ್ತಿದೆ. 20x40 ಉದ್ದಗಲದ 12 ಅಡಿ ಎತ್ತರದ ವೇದಿಕೆಯಲ್ಲಿ ಬಾಬಾ ರಾಮದೇವ್‌ ಅವರು ಮುಂಜಾನೆ ಯೋಗ ಭಂಗಿಗಳನ್ನು ಪ್ರದರ್ಶಿಸಲಿದ್ದಾರೆ.

ಎರಡು ಸಮಾವೇಶಗಳು...

ಫೋಟೋ - http://v.duta.us/JAvOYwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/GTCpowAA

📲 Get Udupi News on Whatsapp 💬