ಇನ್ನೂ ಈಡೇರಿಲ್ಲ ಜಿಲ್ಲಾ ಕೇಂದ್ರ ಬ್ಯಾಂಕ್‌ ಬೇಡಿಕೆ

  |   Yadgirinews

„ಅನೀಲ ಬಸೂದೆ

ಯಾದಗಿರಿ: ಗಡಿ ಜಿಲ್ಲೆ ಯಾದಗಿರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಇಲ್ಲದಿದ್ದರೂ ಅನಾನುಕೂಲಗಳ ಮಧ್ಯೆಯೇ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ನಿಯಮಿತ ಶಾಖೆಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರಿಗೆ ಜೀವಾಳವಾಗಿವೆ.

ಈ ಹಿಂದೆ ಕಲಬುರಗಿ ಅಖಂಡ ಜಿಲ್ಲೆಯಾಗಿದ್ದ ಸಂದರ್ಭದಿಂದಲೂ ಕಲಬುರಗಿ ಕೇಂದ್ರಲ್ಲಿಯೇ ಇರುವ ಡಿಸಿಸಿ ಬ್ಯಾಂಕ್‌ ಯಾದಗಿರಿ ಜಿಲ್ಲೆಯಾಗಿ 10 ವರ್ಷ ಕಳೆದರೂ ತನ್ನ ಕೇಂದ್ರ ಕಚೇರಿ ಆರಂಭಿಸಿಲ್ಲ. ಹಾಗಾಗಿ ವ್ಯವಹಾರದ ದೃಷ್ಟಿಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾ ಕೇಂದ್ರದಲ್ಲಿ ಡಿಸಿಸಿ ಬ್ಯಾಂಕ್‌ ತೆರೆಯುವ ಬೇಡಿಕೆ ಬಹುವರ್ಷಗಳಿಂದಲೂ ಇದೆ. ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿಗತಿ ನೆಲಕಚ್ಚಿದ್ದು, ಜಿಲ್ಲೆಯಲ್ಲಿ ಯಾವುದೇ ಸಹಕಾರಿ ಕಾರ್ಖಾನೆಗಳಿಲ್ಲ. ಕೇವಲ ರೈತರಿಗೆ ಸಾಲ ಸೌಲಭ್ಯ, ಠೇವಣಿ ಸಂಗ್ರಹ, ಆಭರಣ ಸಾಲ, ವ್ಯಾಪಾರ ಅಭಿವೃದ್ಧಿಗೆ ಸಾಲ, ವಾಹನ ಸಾಲದಂತ ಸೌಕರ್ಯಗಳು ಜನರಿಗೆ ಸಿಗುತ್ತಿದೆ. ಕಳೆದೆರಡು ವರ್ಷಗಳಿಂದ ಸ್ತ್ರೀ ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲ ಸೌಲಭ್ಯ ನೀಡುವುದನ್ನು ನಿಲ್ಲಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಕಲಬುರಗಿ ಡಿಸಿಸಿ ಬ್ಯಾಂಕ್‌ ಶಾಖೆಗಳು ಜಿಲ್ಲೆಯ ಮೂರು ಕಡೆ ಕಾರ್ಯನಿರ್ವಹಿಸುತ್ತಿವೆ. ಯಾದಗಿರಿ ತಾಲೂಕಿನ ಡಿಸಿಸಿ ಬ್ಯಾಂಕ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಸದಸ್ವತ್ವ ಪಡೆದಿದ್ದಾರೆ. ಇದರ ವ್ಯಾಪ್ತಿಯಲ್ಲಿ 30 ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ನಡೆಯುತ್ತಿವೆ. ವಾರ್ಷಿಕ ಅಂದಾಜು 20 ಕೋಟಿಯಷ್ಟು ರೂ. ವಹಿವಾಟು ಹೊಂದಿವೆ. ಶಹಾಪುರ ಶಾಖೆಯಲ್ಲಿ 35 ಸಾವಿರ ಜನ ಸದಸ್ವತ್ವ ಹೊಂದಿದ್ದು, ಒಟ್ಟು 80 ಕೋಟಿಯಷ್ಟು ವಾರ್ಷಿಕ ವಹಿವಾಟು ಇದೆ. ಇದರಡಿ 33 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಹಲವು ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ಸುರಉಪುರ ಶಾಖೆಯಲ್ಲಿ 14 ಸಾವಿರ ಜನ ಸದಸ್ವತ್ವ ಪಡೆದಿದ್ದಾರೆ. ಇದರಡಿ 31 ಕೃಷಿ ಪತ್ತಿನ ಸಹಕಾರಗಳು, 40 ನೀರು ಬಳಕೆದಾರರ ಸಹಕಾರಿಗಳು, 2 ಸಹಕಾರಿ ಬ್ಯಾಂಕ್‌ಗಳು ಸೇರಿ ವಿವಿಧೋದ್ದೇಶ ಸಹಕಾರಗಳಿವೆ....

ಫೋಟೋ - http://v.duta.us/dOJ9DAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Gv_vPQAA

📲 Get Yadgiri News on Whatsapp 💬