ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು!

  |   Gadagnews

ಗಜೇಂದ್ರಗಡ: ಮಳೆ ಬಂದರೆ, ಬೆಳೆ ಬರೋಲ್ಲ. ಬೆಳೆ ಬರದಿದ್ದರೆ ನಮ್ಮ ಬದುಕು ನಡೆಯುವುದಿಲ್ಲ ಎನ್ನುವ ರೈತರ ಬದುಕು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಈ ಬಾರಿ ಅತಿವೃಷ್ಟಿ ಮಧ್ಯೆಯೂ ಅಲ್ಪಸ್ವಲ್ಪ ಬೆಳೆದ ಈರುಳ್ಳಿ ಬೆಳೆಗೆ ಸಮರ್ಪಕ ಬೆಲೆ ಸಿಗದ ಪರಿಣಾಮ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು ಬರುವಂತಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಮಳೆಯೂ ಸಂಪೂರ್ಣ ಸುರಿಯುವುದಲ್ಲದೇ ಅತಿಯಾದ ಮಳೆಯಿಂದಾಗಿ ಎರಿ ಭೂಮಿಯಲ್ಲಿ ತಾಲೂಕಿನಾದ್ಯಂತ ಈ ವರ್ಷ ಬೆಳೆದ ಉಳ್ಳಾಗಡ್ಡಿ (ಈರುಳ್ಳಿ) ಫಸಲು ರೈತರ ಕೈಗೆ ಸಿಗದೇ, ನೆಲಸಮವಾಗಿದೆ. ಇನ್ನೊಂದೆಡೆ ಅಲ್ಪಸ್ವಲ್ಪ ಫಸಲು ಬಂತಲ್ಲ ಎಂದು ತೃಪ್ತಿ ಪಡುತ್ತಿದ್ದ ಕೆಲ ರೈತರಿಗೆ ಬೆಲೆ ಕುಸಿತದ ಬರಸಿಡಿಲು ಬಡಿದಂತಾಗಿದೆ.

ಸತತ ಬೆಲೆ ಕುಸಿತದ ಆತಂಕವನ್ನು ಎದುರಿಸುತ್ತಾ ಬರುತ್ತಿರುವ ಈರುಳ್ಳಿ ಬೆಳೆಗಾರರಿಗೆ ಈ ಬಾರಿಯ ಭೀಕರ ಅತಿವೃಷ್ಟಿಯ ಮಧ್ಯೆಯೂ ಬೆಲೆ ಕುಸಿತರ ಕರಿ ನೆರಳು ಆವರಿಸಿದೆ. ಈ ಬಾರಿ ದುಬಾರಿ ಬೀಜ, ಬಿತ್ತನೆ, ಕಳೆ ನಿರ್ವಹಣೆ, ಗೊಬ್ಬರ ಹಾಕಿ ತಾಲೂಕಿನಲ್ಲಿ 13 ಸಾವಿರಕ್ಕೂ ಅ ಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬಿತ್ತನೆಯಾಗಿದೆ....

ಫೋಟೋ - http://v.duta.us/1kSToQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/5CmgzAAA

📲 Get Gadag News on Whatsapp 💬