ಈ ಶಾಲೆಗೆ ದಾರಿ ಯಾವುದಯ್ನಾ?

  |   Bijapur-Karnatakanews

„ಲಕ್ಷ್ಮಣ ಹಿರೇಕುರುಬರ

ತಾಂಬಾ: ಅಸರ್ಮಪಕ ಚರಂಡಿ ವ್ಯವಸ್ಥೆ ಮತ್ತು ಸಾಮೂಹಿಕ ಶೌಚಾಲಯದ ಕಲುಷಿತ ನೀರು ರಸ್ತೆತುಂಬ ಹರಿಯುತ್ತಿರುವುದರಿಂದ ಇಲ್ಲಿನ ಇಂದಿರಾ ನಗರದ ಸರ್ಕಾರಿ ಪ್ರೌಢಶಾಲೆಗೆ ಹೋಗಲು ದಾರಿ ಇಲ್ಲದಂತಾಗಿದೆ.!

ಗ್ರಾಮದ ಇಂದಿರಾ ನಗರದಲ್ಲಿ ಸುಮಾರು 2000 ಜನರು ವಾಸಿಸುತ್ತಿದ್ದು, ಇಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಗ್ರಾಪಂ ಸದಸ್ಯರು, ಅಧಿಕಾರಿಗಳು ಸಮರ್ಪಕ ಚರಂಡಿ ನಿರ್ಮಿಸದ ಕಾರಣ ರಸ್ತೆಗುಂಟ ಚರಂಡಿ ನೀರು ಹರಿದು ಶಾಲೆ ಕಟ್ಟಡಕ್ಕೆ ಹತ್ತಿಕೊಂಡಿರುವ ಶೌಚಾಲಯದಲ್ಲಿ ಸಂಗ್ರಹಗೊಂಡಿದೆ. ಇದು ಈಗ ಗಬ್ಬೆದ್ದು ನಾರುತ್ತಿದ್ದು, ಸರ್ಕಾರಿ ಪ್ರೌಢಶಾಲೆಗೆ ತೆರಳುವ ಮಕ್ಕಳಿಗೆ ತೊಂದರೆಯಾಗಿದೆ. ಇಲ್ಲಿ ಜ್ಞಾನ ದೇಗುಲವಿದ್ದು, ಮೂಗು ಮುಚ್ಚಿಕೊಂಡು ಬಾ ಎನ್ನುವಂತಾಗಿದೆ.

ಶಾಲೆ ಪಕ್ಕವೇ ಸಾಮೂಹಿಕ ಶೌಚಾಲಯ: ಶಾಲೆಯೆಂದರೆ ಜೀವಂತ ದೇವರ ದೇಗುಲ. ಆದರೆ, ಶಾಲೆ ಪಕ್ಕವೇ ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ. ಗ್ರಾಮದ ಬಚ್ಚಲ ನೀರು ಮತ್ತು ಇಡೀ ಗ್ರಾಮದ ತ್ಯಾಜ್ಯವನ್ನು ಇಲ್ಲಿಯೇ ಎಸೆಯಲಾಗುತ್ತಿದೆ. ಹೀಗಾಗಿ ಮಕ್ಕಳು ನಿತ್ಯ ಪಾಠ, ಆಟ, ಬಿಸಿಯೂಟವನ್ನು ದುರ್ವಾಸನೆಯಲ್ಲಿಯೇ ಮಾಡಬೇಕಿದೆ. ಶಾಲೆಯ ಪಕ್ಕದಲ್ಲಿರುವ ಸಾಮೂಹಿಕ ಶೌಚಾಲಯದ ದುರ್ವಾಸನೆಗೆ ಶಾಲಾ ಶಿಕ್ಷಕರು ಬೇಸತ್ತಿದ್ದಾರೆ. ಅವರು ಕೂಡ ಮೂಗು ಮುಚ್ಚಿಕೊಂಡೆ ಶಾಲೆಗೆ ಬರುವಂತಾಗಿದೆ....

ಫೋಟೋ - http://v.duta.us/pX7-HwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/m_Yh9AAA

📲 Get Bijapur Karnataka News on Whatsapp 💬