ಎತ್ತಿನ ಹೊಳೆ ಸಂತ್ರಸ್ತರಿಗೆ ಅನ್ಯಾಯವಾಗಲ್ಲ

  |   Hassannews

ಅರಸೀಕೆರೆ: ಎತ್ತಿನ ಹೊಳೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಂತ್ರಸ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಸೂಕ್ತ ಪರಿಹಾರ ಕೊಡಿಸುವುದಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದರು.

ಜಿಲ್ಲಾಡಳಿತ ಹಾಗೂ ಎತ್ತಿನ ಹೊಳೆ ಯೊಜನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹಾರನಹಳ್ಳಿ ಯಲ್ಲಿ ಗುರುವಾರ ನಡೆದ ಎತ್ತಿನಹೊಳೆ ಕಾಮಗಾರಿ ಅನುಷ್ಠಾನಕ್ಕಾಗಿ ಶೇ.50ಕ್ಕೂ ಹೆಚ್ಚು ಕೃಷಿಭೂಮಿಯನ್ನ ಕಳೆದುಕೊಂಡ ರೈತರ ಪುನರ್ವಸತಿ ಹಾಗೂ ಪುನರ್‌ ವ್ಯವಸ್ಥೆಯ ಪಟ್ಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

7 ಜಿಲ್ಲೆಗಳಿಗೆ ವರದಾನ: ಸತತ ಬರಗಾಲ ಪೀಡಿತ ಪ್ರದೇಶವಾದ ಮಧ್ಯ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆ ಹಾಗೂ 29 ತಾಲೂಕುಗಳಿಗೆ ಎತ್ತಿನಹೊಳೆ ಯೋಜನೆ ವರದಾನವಾಗಿದೆ ಎಂದರು.ಈಗಾಗಲೇ ಕಾಮಗಾರಿ ಬಿರುಸಿನಿಂದ ಸಾಗಿದೆ. ಶೇ.50 ಕ್ಕೂ ಹೆಚ್ಚು ಭೂಮಿ ಕಳೆದುಕೊಂಡ ರೈತರಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಪರಿಹಾರ ತಾರತಮ್ಯ ಸರಿಪಡಿಸಲು ಆಗ್ರಹ: ಈ ವೇಳೆ ಮಧ್ಯ ಪ್ರವೇಶಿಸಿದ ಜಿಲ್ಲಾ ರೈತ ಸಂಘದ ಸಂಚಾಲಕ ಪ್ರಸನ್ನ ಕುಮಾರ್‌ ಮಾತನಾಡಿ ಎತ್ತಿನಹೊಳೆ ಕಾಮಗಾರಿಗೆ ಭೂಮಿ ಕಳೆದುಕೊಂಡ ಕೆಲ ರೈತರ ಹೆಸರು ಫ‌ಲಾನುಭವಿಗಳಪಟ್ಟಿಯಲ್ಲಿ ಕಾಣುತ್ತಿಲ್ಲ. ಸಕಲೇಶ ಪುರ ಮಾದರಿಯಲ್ಲೇ ತಾಲೂಕಿನ ರೈತರಿಗೂ ಪರಿಹಾರ ದೊರಕಬೇಕು ಹಾಗೂ ಒಂದೇ ಕಂತಿನಲ್ಲಿ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಬೇಕು ಎಂದು ಸಭೆಯ ಗಮನ ಸೆಳೆದರು....

ಫೋಟೋ - http://v.duta.us/jolkGwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/wppLsgAA

📲 Get Hassan News on Whatsapp 💬