ಕುಡಿವ ನೀರಿಲ್ಲದೆ ಪರಿತಪಿಸುವ ತಿಮ್ಲಾಪುರ ಕೋಡಿ ಜನ

  |   Tumkurnews

ಹುಳಿಯಾರು: ನಮ್ಮ ಬೀದಿಗೆ ನೀರು ಸರಬರಾಜು ಮಾಡುವ ಕೊಳವೆಬಾವಿ ಮೋಟಾರ್‌ ಕೆಟ್ಟು 15 ದಿನವಾಗಿದೆ, ಈವರೆಗೂ ರಿಪೇರಿ ಮಾಡಿಸಿಲ್ಲ, 2-3 ಬಾರಿ ಕೆಟ್ಟು ಹೋಗಿದ್ದ ಮೋಟಾರ್‌ ಅನ್ನು ರಿಪೇರಿ ಮಾಡಿಸಿದ್ದೇವೆ. ಆದರೆ, ಈಗ, ಪಪಂಗೆ ಮನವಿ ಮಾಡಿದರೂ ರಿಪೇರಿ ಮಾಡಿಸುತ್ತಿಲ್ಲ, ಅಕ್ಕಪಕ್ಕದ ಜಮೀನುಗಳಿಗೆ ಹೋಗಿ ಕಾಡಿಬೇಡಿ ನೀರು ತರಬೇಕಿದೆ.

ಇದು ಹುಳಿಯಾರು ಪಪಂ ವ್ಯಾಪ್ತಿಯ ತಿಮ್ಲಾಪುರ ಕೋಡಿ ನಿವಾಸಿಗಳ ಅಳಲಾಗಿದೆ. ತಿಮ್ಲಾಪುರ ಕೋಡಿಯಲ್ಲಿನ ಕೈ ಪಂಪು ಹುಳಿಯಾರು ಪಟ್ಟಣಕ್ಕೆ ಹತ್ತಾರು ವರ್ಷಗಳ ಕಾಲ ಕುಡಿವ ನೀರು ಸರಬರಾಜು ಮಾಡಿತ್ತು. ಸರಿಯಾದ ಮಳೆಯಿಲ್ಲದೆ ಕೊಳವೆ ಬಾವಿಯ ಅಂತರ್ಜಲ ಕಡಿಮೆಯಾಯಿತು. ಹಾಗಾಗಿ 2-3 ವರ್ಷಗಳ ಹಿಂದೆ ಕೈ ಪಂಪು ತೆಗೆದು ಮೋಟರ್‌ ಬಿಟ್ಟು ಇರುವ ನೀರನ್ನು ಸಿಸ್ಟನ್‌ ಮೂಲಕ ಕೋಡಿ ನಿವಾಸಿಗಳಿಗೆ ನೀಡಲಾಗುತ್ತಿತ್ತು.

3-4 ಕಿ.ಮೀ.ದೂರ ಹೋಗಬೇಕಿದೆ: ಮುಂಜಾನೆ ತ್ರಿಫೇಸ್‌ ವಿದ್ಯುತ್‌ ಕೊಟ್ಟಾಗ ಅಕ್ಕಪಕ್ಕದ ಜಮೀನಿಗೆ ಹೋಗಿ ಅಲ್ಲಿನ ಮಾಲಿಕರನ್ನು ಕಾಡಿಬೇಡಿ ನೀರು ತರುವ ಅನಿವಾರ್ಯತೆಯಿದೆ. ಅವರೂ ಬಿಡದಿದ್ದರೆ 3-4 ಕಿ.ಮೀ.ದೂರಕ್ಕೆ ಹೋಗಿ ನೀರನ್ನು ತರಬೇಕಿದೆ. ಹಾಗಾಗಿ ದಿನಬೆಳಗಾದರೆ ಇಲ್ಲಿನ ಮಹಿಳೆಯರಿಗೆ ನೀರು ತರುವುದೇ ಗೋಳಾಗಿ ಪರಿಣಮಿಸಿದೆ. ಅಲ್ಲದೆ ಈ ಸ್ಥಳ ಪಟ್ಟಣ ಪ್ರದೇಶದಿಂದ 1 ಕಿ.ಮೀ. ದೂರವಿದ್ದು ಕೆರೆಯ ಕೋಡಿ ಬಳಿಯಿದೆ. ಇಲ್ಲಿನ ನಿವಾಸಿಗಳು ಆಸ್ಪತ್ರೆ, ಸಂತೆ, ಅಂಗಡಿ, ಶಾಲೆಗಳಿಗೆ ಬರಲು 1 ಕಿ.ಮೀ ನಡೆಯುವುದು ಅನಿವಾರ್ಯ. ವಿಧಿಯಿಲ್ಲದೆ ನಡೆದುಕೊಂಡೆ ಓಡಾಡುವ ಇಲ್ಲಿನ ಜನರಿಗೆ ಈ ರಸ್ತೆಯ ಇಕ್ಕೆಲಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಜಾಲಿ ಗಿಡಗಳು ತೊಡಕಾಗಿದ್ದು ತೆರವು ಮಾಡಿಸುವಂತೆ ಪಪಂ ಅಧಿಕಾರಿಗಳಿಗೆ ಹೇಳಿದರೂ ತೆರವು ಮಾಡಿಸಿಲ್ಲ...

ಫೋಟೋ - http://v.duta.us/3FWS8gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/SFSUTQAA

📲 Get Tumkur News on Whatsapp 💬