ಕನಕದಾಸ ಜಯಂತಿ: "ಕ‌ನಕದಾಸರು ಇಂದಿಗೂ ಪ್ರಸ್ತುತ'

  |   Udupinews

ಉಡುಪಿ: ಕನಕದಾಸರ ಕೀರ್ತನೆಗಳು, ತತ್ವಗಳನ್ನು ಅರಿಯವುದರ ಮೂಲಕ ಸಮಾಜದಲ್ಲಿ ಎಲ್ಲ ಸಮುದಾಯಗಳ ಜನರು ಶಾಂತಿ ಸಹಬಾಳ್ವೆಯಿಂದ ಬಾಳಲು ಸಾಧ್ಯವಿದೆ. ಈ ಮೂಲಕ 500 ವರ್ಷಗಳ ಹಿಂದೆ ಜನಿಸಿದ ಕನಕದಾಸರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಗದೀಶ್‌ ಹೇಳಿದರು.

ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜಿಲ್ಲಾಧಿಕರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗದಲ್ಲಿ ಜನಿಸಿದ ಕನಕದಾಸರು ಇಡೀ ಮಾನವ ಕುಲದ ಸುಧಾರಣೆಗೆ ಪ್ರಯತ್ನಿಸಿದ್ದು ನೆನೆದರೆ ರೋಮಾಂಚನವಾಗುತ್ತದೆ. ಕನಕದಾಸರ ಕೀರ್ತನೆಗಳು ಮಾನವ ಜೀವನ ಹೇಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಎನ್ನುವುದನ್ನು ತಿಳಿಸುತ್ತವೆ. ಅವರ ಚಿಂತನೆ, ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕನಕದಾಸರ ಕುರಿತು ನಿವೃತ್ತ ಉಪನ್ಯಾಸಕ ಮೇಟಿ ಮುದಿಯಪ್ಪ ಉಪನ್ಯಾಸ ನೀಡಿ ದಾಸರಲ್ಲಿ ಶ್ರೇಷ್ಠರಾದ ಕನಕದಾಸರು ಒಬ್ಬ ರಾಷ್ಟ್ರ ಸಂತರು, ಅವರ ಕೀರ್ತನೆಗಳು ಗ್ರಾಮೀಣ ಜನತೆಗೂ ಸಹ ಸುಲಭದಲ್ಲಿ ಅರ್ಥವಾಗುತ್ತದೆ ಎಂದರು....

ಫೋಟೋ - http://v.duta.us/f9GwmAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FaL3LwAA

📲 Get Udupi News on Whatsapp 💬