ಕಾಮಗಾರಿ ಮಾಹಿತಿ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ ಮಾಡಿ

  |   Raichurnews

ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಂಡ ಕಾಮಗಾರಿಗಳ ಮಾಹಿತಿಯನ್ನು ಮಂಡಳಿ ವೆಬ್‌ಸೈಟ್‌ಗೆ ಕಾಲಕಾಲಕ್ಕೆ ಅಪ್‌ಡೇಟ್‌ ಮಾಡದಿದ್ದಲ್ಲಿ ಸಮಸ್ಯೆಗೆ ಸಿಲುಕುತ್ತೀರಿ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಅಧಿಕಾರಿಗಳಿಗೆ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಿಡಬ್ಲ್ಯೂಡಿ ಸೇರಿದಂತೆ ವಿವಿಧ ಇಲಾಖೆಗಳು ಕಾಮಗಾರಿ ಮುಗಿಸದ್ದಕ್ಕೆ ಬೇಸರ ವ್ಯಕ್ತಪಡಿಸಿದರು. 2017-18, 2018-19ನೇ ಸಾಲಿನಲ್ಲಿ ಮಂಡಳಿ ಅನುಮೋದನೆ ನೀಡಿದ ಕಾಮಗಾರಿಗಳ ಕೆಲಸ ಶುರು ಮಾಡಿದರೂ ಪ್ರಗತಿಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿಲ್ಲ. ಯಾಕೆ ಇಷ್ಟು ನಿಷ್ಕಾಳಜಿ ತೋರುತ್ತಿದ್ದಿರಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಡಳಿಯ ವೆಬ್‌ಸೈಟ್‌ನಲ್ಲಿ ಕಾಮಗಾರಿಗಳ ಪ್ರಗತಿ ವಿವರ ದಾಖಲಿಸುವುದು ಕಡ್ಡಾಯ. ಕಾಮಗಾರಿಗಳ ಆರಂಭ, ವಿವಿಧ ಹಂತಗಳು ಹಾಗೂ ಮುಗಿದಿದ್ದರೆ ಆ ಮಾಹಿತಿಯನ್ನು ಕೂಡಲೇ ಅಪ್‌ಡೇಟ್‌ ಮಾಡಬೇಕು. 2017-18, 2018-19ನೇ ಸಾಲಿನಲ್ಲಿ ಅಂದಾಜು ಪಟ್ಟಿ ಅನುಮೋದನೆಗೊಂಡ ಕಾಮಗಾರಿಗಳ ಪ್ರಗತಿ ವಿವರಗಳನ್ನು ಕೂಡಲೇ ಅಪ್‌ಡೇಟ್‌ ಮಾಡಬೇಕು. 2019-20ನೇ ಸಾಲಿನಲ್ಲಿ ಕಾಮಗಾರಿಗಳ ಅಂದಾಜು ಪಟ್ಟಿ ಸಲ್ಲಿಸದಿದ್ದರೆ ಕೂಡಲೇ ಸಲ್ಲಿಸುವಂತೆ ಸೂಚಿಸಿದರು.

ಮಂಡಳಿ ಅ ಧಿಕಾರಿಗಳು ಎಲ್ಲ ಕಾಮಗಾರಿ ಪರಿಶೀಲಿಸುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಈ ಕುರಿತು ಮಾಹಿತಿ ಕೇಳುತ್ತಾರೆ. ಇದೇ ಮಾಹಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ಹೋಗಲಿದ್ದು, ಸಮಸ್ಯೆ ಎದುರಿಸಬೇಕಾಗುತ್ತದೆ. ಭೌತಿಕ ಸಾಧನೆ ಕಡಿಮೆ ತೋರಿಸಿ, ಅರ್ಥಿಕ ಸಾಧನೆ ಹೆಚ್ಚು ತೋರಿಸಿದರೆ ಭೌತಿಕ ಸಾಧನೆಯನ್ನು ಸ್ಪಷ್ಟವಾಗಿ ನಮೂದಿಸಿರುವದಿಲ್ಲವೆಂದೇ ಅರ್ಥ. ಭೌತಿಕ ಸಾಧನೆಯನ್ನು ಸ್ಪಷ್ಟವಾಗಿ ದಾಖಲಿಸಬೇಕು ಎಂದು ಸಲಹೆ ನೀಡಿದರು....

ಫೋಟೋ - http://v.duta.us/fTb6AgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/bkyvRgAA

📲 Get Raichur News on Whatsapp 💬