ಜಿಲ್ಲೆಯ ಅಭಿವೃದ್ಧಿಗೆ ಸಹಕಾರ 'ಕಳಸಪ್ರಾಯ'

  |   Chikkamagalurunews

„ಎಸ್‌.ಕೆ.ಲಕ್ಷ್ಮೀ ಪ್ರಸಾದ್‌

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಶತಮಾನಕ್ಕೂ ಹಿಂದೆಯೇ ಹಿರಿಯ ಸಹಕಾರಿಗಳ ದೂರದೃಷ್ಟಿಯ ಫಲವಾಗಿ ಆರಂಭಗೊಂಡ ಸಹಕಾರ ಸಂಘಗಳು ಇಂದು ಬೃಹದಾಕಾರವಾಗಿ ಬೆಳೆದು ನಿಲ್ಲುವ ಮೂಲಕ ಜಿಲ್ಲೆಯ ಅಭಿವೃದ್ಧಿಯಲ್ಲಿ ಮುಕುಟಪ್ರಾಯವಾಗಿ ಕಂಗೊಳಿಸುತ್ತಿವೆ.

ಜಿಲ್ಲೆಯಲ್ಲಿ 1905ರಲ್ಲಿ ಮೊದಲ ಸಹಕಾರ ಸಂಘ ಆರಂಭವಾಗಿದ್ದು, ತರೀಕೆರೆ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ "ಆ ದಿ ಕರ್ನಾಟಕ ಕೋ ಆಪರೇಟಿವ್‌ ಸೊಸೈಟಿ' ಹೆಸರಿನಲ್ಲಿ ಮೊದಲ ಸಹಕಾರ ಸಂಘ ಆರಂಭವಾಯಿತು. ಆ ನಂತರ ಮೂಡಿಗೆರೆ ತಾಲೂಕಿನ ಕಳಸದಲ್ಲಿ 1906ರಲ್ಲಿ ಗಜಾನನ ಸಹಕಾರ ಸಂಘ, ಅದೇ ವರ್ಷ ಕಡೂರಿನಲ್ಲಿ ಪಟ್ಟಣ ಸಹಕಾರ ಸಂಘ ಆರಂಭವಾಯಿತು.

ಚಿಕ್ಕಮಗಳೂರಿನಲ್ಲಿ ಪ್ರಥಮ ಸಹಕಾರ ಸಂಘ ಆರಂಭವಾಗಿದ್ದು 1910ರಲ್ಲಿ. ಈ ಪೈಕಿ ಮೊದಲ ಎರಡು ಸಹಕಾರ ಸಂಘಗಳು ಈ ಹಿಂದೆಯೇ ಸಮಾಪನೆಗೊಂಡಿದ್ದು, ಉಳಿದ ಸಂಘಗಳು ಈಗಲೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟಾರೆ 561 ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಸಹಕಾರಿ ಸಾರಿಗೆ, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ಹಾಗೂ ಕರ್ನಾಟಕ ಮಹಿಳಾ ಸಹಕಾರಿ ಬ್ಯಾಂಕ್‌ಗಳು ಪ್ರಮುಖವಾಗಿವೆ....

ಫೋಟೋ - http://v.duta.us/DiIubAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/JGhLrgAA

📲 Get Chikkamagaluru News on Whatsapp 💬