ತಮ್ಮ ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ: ರಮೇಶ ಜಾರಕಿಹೊಳಿ
ಬೆಳಗಾವಿ: ಸತೀಶ ಜಾರಕಿಹೊಳಿ ಕುತಂತ್ರ ಮಾಡಿದ, ಕಿರಿಯ ಸಹೋದರ ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು ಇಬ್ಬರು ಸಹೋದರರ ವಿರುದ್ಧ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಬಿಜೆಪಿ ಸೇರ್ಪಡೆ ಬಳಿಕ ಶುಕ್ರವಾರ ಬೆಳಗಾವಿಗೆ ಆಗಮಿಸಿದ ಅವರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿ ಇಂದಿನಿಂದ ನನ್ನ ಶತ್ರು. ನನ್ನ ವಿರೋಧಿ ಆಗಿರುವ ಲಖನ್ ಡಿಸೆಂಬರ್ ಐದರವರೆಗೆ ನನ್ನ ತಮ್ಮನಲ್ಲ. ಚುನಾವಣೆ ಮುಗಿದ ಬಳಿಕ ನಾವು ಮತ್ತೆ ಅಣ್ಣ- ತಮ್ಮ. ಲಖನ್ ನನಗೆ ಬೆನ್ನಿಗೆ ಚೂರಿ ಹಾಕಿದ್ದಾನೆ. ಸತೀಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ. ಲಖನ್ ಗೆ ದೇವರು ಒಳ್ಳೆಯ ಬುದ್ದಿ ಕೊಡಲಿ. ಒಬ್ಬ ಸಹೋದರ ಮೋಸ ಹೋಗಿದ್ದನ್ನು ನೋಡಿ ಲಖನ್ ಈಗ ಮೋಸ ಹೋಗಿದ್ದಾರೆ ಎಂದರು.
ಎಚ್. ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್. ಬ್ರಿಟಿಷರು ಕುತಂತ್ರ ಮಾಡಿದ ಹಾಗೆ ಕಾಂಗ್ರೆಸ್ ನವರು ಮಾಡಿದ್ದಾರೆಎಂದು ಕುಟುಕಿದ ಅವರು, ಕಳೆದ ಹದಿನೈದು ದಿನಗಳಿಂದ ಬಿಜೆಪಿಗೆ ಹೋಗುವ ಕುರಿತು ಬಾಯಿ ಬಿಟ್ಟಿರಲಿಲ್ಲ. ಕಾನೂನಿನಲ್ಲಿ ಸಿಕ್ಕಿಸಬೇಕೆಂದು ನಮ್ಮ ವಿರೋಧಿಗಳು ಪ್ರಯತ್ನ ಮಾಡಿದ್ದರು. ನಮ್ಮ ವಿರೋಧಿಗಳಿಂದ ಕುತಂತ್ರ ಮಾಡಿ ಸೋಲಿಸಬಹುದು ಎಂಬ ಲೆಕ್ಕಾಚಾರ ಹಾಕಿದ್ದರು ಎಂದು ವಾಗ್ದಾಳಿ ನಡೆಸಿದರು....
ಫೋಟೋ - http://v.duta.us/9vq2iAAA
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_EVCswAA