ತ್ಯಾವರೆಕೊಪ ಸಿಂಹಧಾಮ ಅಭಿವದ್ಧಿಗೆ ಕ್ರಮ

  |   Shimoganews

ಶಿಕಾರಿಪುರ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವನ್ನು ಇನ್ನಷ್ಟು ವಿಸ್ತರಣೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮವನ್ನು ಅಭಿವೃದ್ಧಿ ಪಡಿಸಿ ಇನ್ನೂ ಹೆಚ್ಚು ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ವಿಸ್ತರಣೆ ಮಾಡಲಾಗುವುದು. ತ್ಯಾವರೆಕೊಪ್ಪದ ಹುಲಿ- ಸಿಂಹಧಾಮದಲ್ಲಿ ಈಗಿರುವ ಜಾಗ ಚಿಕ್ಕದಾಗಿದ್ದು ಪ್ರವಾಸಿಗರಿಗೆ ಹಾಗೂ ಹುಲಿ ಸಿಂಹಗಳ ಕಡಿಮೆ ಜಾಗವಾಗಿದೆ. ಇದನ್ನು ಇನಷ್ಟು ಹೆಚ್ಚು ವಿಸ್ತರಣೆ ಮಾಡಬೇಕು. ಈ ಮೂಲಕ ಪ್ರವಾಸಿಗರಿಗೆ ಎಲ್ಲಾ ರೀತಿ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಶಿಕಾರಿಪುರ ತಾಲೂಕಿನಲ್ಲಿ ಒಂದು ಸುಂದರವಾದ ಟ್ರೀ ಪಾರ್ಕ್‌ ನಿರ್ಮಾಣದ ಉದ್ದೇಶವನ್ನು ಹೊಂದಿದ್ದು 50 ಎಕರೆ ವಿಸ್ತರಣೆಯಲ್ಲಿ ದೊಡ್ಡದಾದ ಸುಂದರವಾದ ಒಂದು ಟ್ರೀ ಪಾರ್ಕ್‌ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಈ ಕುರಿತು ಕೆಲಸ ಪ್ರಾರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ಶ್ರೀನಿವಾಸುಲು, ಮಲೆನಾಡು ಎಂದರೆ ಅತ್ಯಂತ ಸುಂದರವಾದ ಪ್ರದೇಶ. ಪ್ರಕೃತಿಯ ದೇವಾಲಯ ಎಂದು ಕರೆಯುತ್ತಾರೆ. ಅದರೆ ಅದನ್ನು ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ನಮ್ಮದು. ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಶಿವಮೊಗ್ಗವಾಗಿದೆ. ಆದರೆ ಕಳೆದ ಬಾರಿ ಬಂದ ಮಳೆಗೆ ಶಿವಮೊಗ್ಗ ಮುಳುಗಡೆಯಾಗಿದೆ ಎಂದರೆ ಆಶ್ಚರ್ಯದ ಸಂಗತಿಯಾಗಿದೆ. ನಾವು ಪರಿಸರವನ್ನು ರಕ್ಷಿಸಿಕೊಳ್ಳುವಲ್ಲಿ ಸೋತಿದ್ದೇವೆ. ಪ್ರಕೃತಿ ಸಮತೋಲನದಲ್ಲಿದ್ದರೆ ಯಾವ ಮಳೆ ಬಂದರೂ ಯಾವುದೇ ಹಾನಿಯಾಗುವುದಿಲ್ಲ ಎಂದರು....

ಫೋಟೋ - http://v.duta.us/vALyfAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/TmQuZwAA

📲 Get Shimoga News on Whatsapp 💬