ತಿರುಗಾಟಕ್ಕೆ ಸಜ್ಜಾದ ಯಕ್ಷಗಾನ ಮೇಳಗಳು

  |   Udupinews

ಬಸ್ರೂರು: ಮಳೆಗಾಲ ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಯಕ್ಷರಂಗದ ಬಗ್ಗೆ ಒಂದು ಮುನ್ನೋಟ ಬೀರುವುದು ಹೆಚ್ಚು ಪ್ರಸ್ತುತವಾಗಿದೆ.

ಬಡಗು ತಿಟ್ಟಿನಲ್ಲಿ ಡೇರೆ ಮೇಳಗಳಿರುವುದು ಶ್ರೀ ಸಾಲಿಗ್ರಾಮ ಮತ್ತು ಶ್ರೀ ಪೆರ್ಡೂರು ಮೇಳಗಳು ಮಾತ್ರ. ಈ ಎರಡೂ ಮೇಳಗಳು ಈ ವರ್ಷದ ತಿರುಗಾಟಕ್ಕೆ ಎರಡು-ಮೂರು ಹೊಸ ಪ್ರಸಂಗಗಳನ್ನು ಈಗಾಗಲೇ ತಯಾರು ಮಾಡಿಕೊಂಡಿದೆ. ಈ ಎರಡೂ ಮೇಳಗಳು ಮಳೆಗಾಲದ ಯಕ್ಷಗಾನ ತಿರುಗಾಟವನ್ನು ಮುಗಿಸಿದ್ದು ತಿರುಗಾಟಕ್ಕೆ ಹೊಸ ಕಲಾವಿದರ ಸೇರ್ಪಡೆ ಮತ್ತಿತರ ಬದಲಾವಣೆಯೊಂದಿಗೆ ಸಜ್ಜಾಗಿದೆ.

ಕಳೆದ ವರ್ಷ ಶ್ರೀ ಜಲವಳ್ಳಿ ಮೇಳ ಯಶಸ್ವಿ ತಿರುಗಾಟ ನಡೆಸಿದ್ದರೂ ಈ ಬಾರಿ ತಿರುಗಾಟವನ್ನು ನಡೆಸುತ್ತಿಲ್ಲ. ನಷ್ಟದ ಕಾರಣದಿಂದ ತಿರುಗಾಟವನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಮೇಳದಲ್ಲಿದ್ದ ಪ್ರಸಿದ್ಧ ಕಲಾವಿದರೀಗ ಬೇರೆ ಬೇರೆ ಮೇಳಗಳಲ್ಲಿ ಸೇರ್ಪಡೆಗೊಂಡಿದ್ದಾರೆ.

ಉಳಿದಂತೆ ಬಡಗು ತಿಟ್ಟಿನಲ್ಲಿ ಹಲವು ಬಯಲಾಟದ ಮೇಳಗಳಿದ್ದು ಅವುಗಳಲ್ಲಿ ಶ್ರೀ ಮಂದಾರ್ತಿ, ಶ್ರೀ ಮಾರಣಕಟ್ಟೆ, ಶ್ರೀ ಅಮƒತೇಶ್ವರಿ, ಶ್ರೀ ಕಮಲಶಿಲೆ ಮೇಳಗಳು ಐದು ಮತ್ತು ಎರಡೆರಡು ಮೇಳಗಳನ್ನು ಹೊಂದಿದ್ದು ಖಾಯಂ ಸೇವೆಯಾಟದ ಒತ್ತಡದಲ್ಲಿದೆ. ಉಳಿದಂತೆ ಬಡಗಿನ ಶ್ರೀ ಸೌಕೂರು, ಶ್ರೀ ಮಡಾಮಕ್ಕಿ, ಶ್ರೀ ಹಿರಿಯಡಕ, ಶ್ರೀ ಗೋಳಿಗರಡಿ, ಶ್ರೀ ಚೋನ ಮನೆ ಆಜ್ರಿ, ಶ್ರೀ ಸಿಗಂಧೂರು, ಶ್ರೀ ಹಟ್ಟಿಯಂಗಡಿ, ಶ್ರೀ ಮೇಗರವಳ್ಳಿ, ಶ್ರೀ ಹಾಲಾಡಿ ಮತ್ತಿತರ ಮೇಳಗಳು ಹರಕೆಯಾಟಗಳು ಮತ್ತು ಕಟ್ಟುಕಟ್ಟಲೆಯಾಟವನ್ನು ಯಶಸ್ವಿಯಾಗಿ ನಡೆಸುತ್ತಿವೆ....

ಫೋಟೋ - http://v.duta.us/ACRlxAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/LQP4GgAA

📲 Get Udupi News on Whatsapp 💬