ದಲಿತ ಕಾಲೋನಿಗೆ ಒಂದೇ ಕೊಳಾಯಿ!

  |   Tumkurnews

ಬರಗೂರು: ಬರೋಬ್ಬರಿ 25 ವರ್ಷ ಕಳೆದರೂ ಚರಂಡಿ ಸೌಲಭ್ಯ ಕಾಣದ ದೊಡ್ಡಹುಲಿಕುಂಟೆ ದಲಿತ ಕಾಲೋನಿಯ 70 ಮನೆಗಳ ಜನತೆ ಒಂದೇ ನಲ್ಲಿಯಲ್ಲಿ ಬರುವ ಕುಡಿವ ನೀರಿಗೆ ಪರದಾಡಬೇಕಾಗಿದೆ.

ಸೌಲಭ್ಯದಲ್ಲಿ ತಾರತಮ್ಯ: ಶಿರಾ ತಾಲೂಕಿನ ದೊಡ್ಡಹುಲಿಕುಂಟೆ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಕಲ್ಪತರು ಗ್ರಾಮೀಣ ಬ್ಯಾಂಕ್‌, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ನಾಡ ಕಚೇರಿ ಇರುವ ಗ್ರಾಪಂ ಕೇಂದ್ರ ಸ್ಥಾನ. ಇಂತಹ ಅಭಿವೃದ್ಧಿ ಹೊಂದಿದ ದೊಡ್ಡಹುಲಿ ಕುಂಟೆ ಗ್ರಾಮದ ದಲಿತ ಕಾಲೋನಿಯಲ್ಲಿ 76 ಬಡ ಕುಟುಂಬಗಳ 360 ಮಂದಿ ವಾಸಿ ಸುತ್ತಿದ್ದಾರೆ. ಕಂದಾಯ ಸೇರಿ ಎಲ್ಲಾ ತೆರಿಗೆಯನ್ನು ಗ್ರಾಪಂಗೆ ಕಟ್ಟುತ್ತಾ ಬಂದಿದ್ದರೂ ಮೂಲಭೂತ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ.

ಸಾಂಕ್ರಾಮಿಕ ರೋಗಗಳ ಭೀತಿ: ದೊಡ್ಡಹುಲಿ ಕುಂಟೆ ದಲಿತ ಕಾಲೋನಿ ನಿವಾಸಿ ಲಕ್ಷ್ಮಮ್ಮ ಮಾತನಾಡಿ, ಕಳೆದ 25 ವರ್ಷದಿಂದ ಊರ ಹೊರ ಭಾಗದಿಂದ ಕಾಲೋನಿ ಮೂಲಕ ಹಾದು ಹೋಗುವ ಚರಂಡಿ ಬಿಟ್ಟರೆ ಇನ್ಯಾವುದೇ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಪರಿಣಾಮ ಮನೆ ಗಳಲ್ಲಿ ನಿತ್ಯ ಬಳಕೆ ಮಾಡುವ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿ ಮಲೇರಿಯಾ, ಚಿಕೂನ್‌ಗುನ್ಯಾದಂತಹ ಜ್ವರದಿಂದ ಬಳಲುವಂತಹ ಸ್ಥಿತಿ ನಿರ್ಮಾಣ ವಾಗಿದೆ ಎಂದು ದೂರಿದರು....

ಫೋಟೋ - http://v.duta.us/b7q8oQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/rM-6vwAA

📲 Get Tumkur News on Whatsapp 💬