ದೇವರ ಕೃಪೆಯಿಂದಲೇ ಜಗದಲ್ಲಿ ಸಕಲ ಕಾರ್ಯ

  |   Bidarnews

ಹುಮನಾಬಾದ: ದೇವರನ್ನು ನಂಬದ ವ್ಯಕ್ತಿಗಳು ತಮ್ಮ ಸಾಧನೆಗೆ ಕೇವಲ ತಾವಷ್ಟೇ ಕಾರಣ ಎನ್ನುತ್ತಾರೆ. ಆದರೆ ಈ ಜಗತ್ತಿನಲ್ಲಿ ದೇವರ ಕೃಪೆ ಇಲ್ಲದೇ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು ಎಂದು ಬೀದರ ದಕ್ಷಿಣ ಕ್ಷೇತ್ರ ಶಾಸಕ ಬಂಡೆಪ್ಪ ಖಾಶೆಂಪೂರ ಹೇಳಿದರು.

ಚಿಟಗುಪ್ಪ ತಾಲೂಕು ಚಾಂಗ್ಲೇರಾ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ನಡೆದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ದೇವರೆಂಬ ಅದ್ಭುತ ಶಕ್ತಿಯೊಂದು ಇದೆ ಎನ್ನುವ ಕಾರಣ ಮನುಷ್ಯ ಭಯದಿಂದ ಬದುಕುತ್ತಾನೆ. ಮನುಷ್ಯ ತನ್ನ ಆಪತ್ಕಾಲದಲ್ಲಿ ನೆನೆಸಿಕೊಳ್ಳುವುದು ಮನುಷ್ಯರನ್ನರಲ್ಲ ದೇವರನ್ನು. ದುಃಖದ ಪ್ರಸಂಗ ಬಂದಾಗ ಜನ ದೇವರ ಮೇಲೆ ನಂಬಿಕೆ ಇಡುತ್ತಾನೆ.

ವಿಜ್ಞಾನ, ವೈದ್ಯಕೀಯ ಕ್ಷೇತ್ರ ಎಷ್ಟೇ ಪ್ರಗತಿ ಸಾಧಿಸಿದರೂ ಸಹ ರೋಗಿಯನ್ನು ತಪಾಸಣೆ ಕೈಗೊಳ್ಳುವ ವೈದ್ಯರು ಕೊನೆಗೆ ಹೇಳುವುದಿಷ್ಟೇ "ನನ್ನ ಕೆಲಸ ನಾನು ಮಾಡಿದ್ದೇನೆ ಮಿಕ್ಕಿದ್ದು ದೇವರಿಗೆ ಬಿಟ್ಟಿದ್ದು' ಎಂದು. ಎಂದರೆ ಯಾರಿಗೂ ಕಾಣದ ಅಗೋಚರ ಶಕಿ ಇದೆ ಎಂಬುದನ್ನು ಪ್ರತಿಯೊಬ್ಬರು ನಂಬುತ್ತಾರೆ. ಆ ಶಕ್ತಿಯೇ ದೇವರು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ವರ್ಷಗಳು ಗತಿಸಿದಂತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿಗಳ ಮೇಲೆ ಹೆಚ್ಚು ಒತ್ತಡ ಹೇರಿ ಕಲ್ಯಾಣ ಮಂಟಪ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಶಕ್ತಿಮೀರಿ ಯತ್ನಿಸುವುದಾಗಿ ಭರವಸೆ ನೀಡಿದರು....

ಫೋಟೋ - http://v.duta.us/-6KIrAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/JMM0ywAA

📲 Get Bidar News on Whatsapp 💬