ನಾಯಕತ್ವ ಕೊರತೆಯಿಂದ ಸೊರಗಿತೆ ಕಾಂಗ್ರೆಸ್‌?

  |   Dharwadnews

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನಿಂದ ಗೆದ್ದ ಕಾಂಗ್ರೆಸ್‌ ಶಾಸಕಿ ಇದ್ದರೂ, ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನ ಗಳಿಸಿರುವುದಕ್ಕೆ ಸ್ಥಳೀಯ ಸಮರ್ಥ ನಾಯಕತ್ವದ ಕೊರತೆಯೇ ಕಾರಣವಾಯಿತೆ?

ರಾಜಕೀಯ ಮೂಲಗಳು ಹೌದು ಎನ್ನುತ್ತಿವೆ. ಕುಂದಗೋಳ ಪಪಂಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಕಾಂಗ್ರೆಸ್‌ ಶಾಸಕರಿದ್ದರೂ ಪಕ್ಷ ಅಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. 19 ಸದಸ್ಯ ಬಲದ ಪಪಂದಲ್ಲಿ ಈ ಬಾರಿ ಬಿಜೆಪಿ 12 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್‌ ಕೇವಲ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದು, ಜೆಡಿಎಸ್‌ ಶೂನ್ಯ ಸಾಧನೆ ತೋರಿದೆ. ಪಕ್ಷೇತರರು ಎರಡು ಕಡೆ ಗೆಲುವು ಕಂಡಿದ್ದಾರೆ.

ಹಿಂದಿನ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ತಲಾ ಆರು ಸ್ಥಾನ ಗಳಿಸಿದ್ದರೆ, ಜೆಡಿಎಸ್‌ ಮೂರು ಸ್ಥಾನ ಗಳಿಸಿತ್ತು. ಈ ಬಾರಿ ಬಿಜೆಪಿ ತನ್ನ ಬಲ ದುಪ್ಪಟ್ಟು ಮಾಡಿಕೊಂಡಿದ್ದರೆ, ಕಾಂಗ್ರೆಸ್‌ ಕಳೆದ ಸಲಕ್ಕಿಂತ ಒಂದು ಸ್ಥಾನ ಕುಸಿತ ಕಂಡಿದೆ. ಜೆಡಿಎಸ್‌ ಶೂನ್ಯಕ್ಕೆ ತಲುಪಿದೆ.

ನಾಯಕತ್ವ ಕೊರತೆ ಕಾರಣವೇ?: ಮಾಜಿ ಸಚಿವ ಸಿ.ಎಸ್‌. ಶಿವಳ್ಳಿ ಅವರ ಅಕಾಲಿಕ ನಿಧನದಿಂದಾಗಿ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕತ್ವ ಕೊರತೆ ಎದುರಿಸುತ್ತಿದೆಯೇ? ಪಪಂ ಚುನಾವಣೆ ಫ‌ಲಿತಾಂಶ ಗಮನಿಸಿದರೆ ಅಂತಹ ಶಂಕೆ ವ್ಯಕ್ತವಾಗುತ್ತಿದೆ. ಆರು ತಿಂಗಳ ಹಿಂದೆಯಷ್ಟೇ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಾಜ್ಯದ ಗಮನ ಸೆಳೆದಿತ್ತು. ಅಂದಿನ ಸಮ್ಮಿಶ್ರ ಸರಕಾರದ ಪಾಲುದಾರ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ದಂಡು, ವಿಪಕ್ಷ ಬಿಜೆಪಿ ನಾಯಕರು ಮುಗಿಬಿದ್ದು ಪ್ರಚಾರ ಮಾಡಿದ್ದರು. ಗೆಲುವಿಗಾಗಿ ತೀವ್ರ ಜಿದ್ದಾಜಿದ್ದಿ ನಡೆಸಿದ್ದರು....

ಫೋಟೋ - http://v.duta.us/JL4UCwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/as4ebgAA

📲 Get Dharwad News on Whatsapp 💬