ನರೇಗಲ್ಲದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಎಂದು?

  |   Gadagnews

ನರೇಗಲ್ಲ: ಗಜೇಂದ್ರಗಡ ತಾಲೂಕಿನಲ್ಲಿಯೇ ದೊಡ್ಡ ಪಟ್ಟಣವಾಗಿರುವ ನರೇಗಲ್ಲದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.

ಇದಕ್ಕೆ ಹೊಂದಿಕೊಂಡಿರುವ ಮಜರೇ ಗ್ರಾಮಗಳಾದ ಕೊಚಲಾಪುರ, ದ್ಯಾಂಪುರ, ಮಲ್ಲಾಪುರ, ತೋಟಗಂಟಿ, ಕೋಡಿಕೊಪ್ಪ ಸೇರಿದಂತೆ ಐದು ಗ್ರಾಮಗಳು ಹಾಗೂ ಪಟ್ಟಣ ಸೇರಿದಂತೆ ತಾಲೂಕಿನಲ್ಲಿಯೇ ದೊಡ್ಡ ಪಟ್ಟಣ ಅಲ್ಲದೇ ವಾಣಿಜ್ಯ ವ್ಯಾಪಾರಿ ಕೇಂದ್ರವಾಗಿದೆ. ಇದು ದಿನದಿಂದ ಬೆಳೆಯುತ್ತಿರುವ ಪಟ್ಟಣವಾಗಿದೆ. ಇಂತಹ ಪಟ್ಟಣಕ್ಕೆ ರಸ್ತೆಗಳಲ್ಲಿ, ಶಾಲಾ ಕಾಲೇಜುಗಳ ಆವರಣದಲ್ಲಿ ಹಾಗೂ ಪಟ್ಟಣದ ಮುಖ್ಯ ವ್ಯಾಪಾರಿ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳ ಅವಶ್ಯಕತೆಯಿದೆ.

ಪಟ್ಟಣಕ್ಕೆ ನಿತ್ಯ ರೋಣ ತಾಲೂಕಿನ ಅಬ್ಬಿಗೇರಿ, ಯರೇಬೇಲೇರಿ, ಡ.ಸ.ಹಡಗಲಿ, ನಾಗರಾಳ, ಗುಜಮಾಗಡಿ ಹಾಗೂ ಗಜೇಂದ್ರಗಡ ತಾಲೂಕಿಗೆ ಬರುವ ನಿಡಗುಂದಿ, ಹಾಲಕೇರಿ, ನಿಡಗುಂದಿಕೊಪ್ಪ, ಕಳಕಾಪುರ ಮತ್ತು ಗದಗ ತಾಲೂಕಿಗೆ ಬರುವ ಕೋಟುಮಚಗಿ, ನಾರಾಯಣಪುರ, ಕಣಗಿನಹಾಳ ಮತ್ತು ಯಲಬುರ್ಗಾ ತಾಲೂಕಿನ ದ್ಯಾಮಪುರ, ತೊಂಡಿಹಾಳ, ಬಂಡಿಹಾಳ, ಚಿಕ್ಕೇನಕೊಪ್ಪ, ಯರೇಹಂಚಿನಾಳ ಸೇರಿದಂತೆ ವಿವಿಧ ಗ್ರಾಮಗಳ ಜನತೆ ನಿತ್ಯ ನರೇಗಲ್ಲ ಪಟ್ಟಣಕ್ಕೆ ಸಂತೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಂದು ಹೋಗುವುದರಿಂದ ಇದೊಂದು ವ್ಯಾಪಾರಿ ಕೇಂದ್ರವಾಗಿದೆ. ಇಂತಹ ಪಟ್ಟಣದಲ್ಲಿ ಒಂದು ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಸಿದೆ....

ಫೋಟೋ - http://v.duta.us/E8fgPwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Qjv0JwAA

📲 Get Gadag News on Whatsapp 💬