ನೀರಾವರಿ ಯೋಜನೆಗೆ ಸರ್ಕಾರ ಆದ್ಯತೆ ನೀಡಲಿ

  |   Chitradurganews

ಚಳ್ಳಕೆರೆ: ರಾಜ್ಯದ ನೀರಾವರಿ ಯೋಜನೆಗಳಿಗೆ ಸೂಕ್ತ ಆರ್ಥಿಕ ನೆರವು ಒದಗಿಸದೇ ಇರುವುದರಿಂದ ವಿಶೇಷವಾಗಿ ಮಧ್ಯ ಕರ್ನಾಟಕದ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಇದರಿಂದ ನೀರಿನ ಅಭಾವ ಕಾಣಿಸಿಕೊಂಡಿದ್ದು, ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಒತ್ತಾಯಿಸಿದರು.

ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮದ ಚೆಲುಮೆರುದ್ರಸ್ವಾಮಿ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಹಾಗೂ ಎಸ್‌ಜೆಎಂ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶರಣರು ಆಶೀರ್ವಚನ ನೀಡಿದರು.

ಸರ್ಕಾರ ಜನರ ಮೇಲೆ ಮುನಿಸಿಕೊಂಡರೂ ಪರವಾಗಿಲ್ಲ, ಆದರೆ ಪ್ರಕೃತಿ ಮಾತ್ರ ಮುನಿಸಿಕೊಳ್ಳಬಾರದು. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯೂ ಸೇರಿದಂತೆ ಎಲ್ಲೆಡೆ ಪ್ರಕೃತಿಯಿಂದ ಉತ್ತಮ ಮಳೆಯಾಗಿದೆ. "ಬರದ ನಾಡು' ಎಂದು ಖ್ಯಾತಿಯಾಗಿದ್ದ ಈ ಭಾಗ ಎಲ್ಲಾ ಗಿಡ, ಮರ, ಕೆರೆ, ಕಟ್ಟೆ ಒಣಗಿ ಭೀಕರ ಬರಗಾಲದ ಸ್ಥಿತಿ ಎದುರಾಗಿತ್ತು. ಇದು ನಮಗೆ ಸದಾ ಕಾಲ ನೋವನ್ನುಂಟು ಮಾಡುತ್ತಿತ್ತು. ಇತ್ತೀಚೆಗೆ ಬಿದ್ದ ಮಳೆಯ ಫಲವಾಗಿ ಬರದ ನಾಡು ಎಂಬ ಹೆಸರನ್ನು ಮರೆಮಾಚಿ ಹಸಿರು ನಾಡಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಪ್ರಕೃತಿ ಮಾತೆಗೆ ಕೃತಜ್ಞಾರಾಗಿಬೇಕು. ನಮ್ಮ ವೈಯಕ್ತಿಕ ಹಿತಾಸಕ್ತಿಗೆ ಗಿಡ-ಮರಗಳನ್ನು ನಾಶ ಮಾಡಬಾರದು ಎಂದರು....

ಫೋಟೋ - http://v.duta.us/zxYmEgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/6xugNgAA

📲 Get Chitradurga News on Whatsapp 💬