ಪೋಡಿನಲ್ಲಿ 30ಕ್ಕೂ ಹೆಚ್ಚು ಜನ ಅಸ್ವಸ್ಥ

  |   Chamarajanagarnews

ಹನೂರು: ಕಳೆದ 15 ದಿನಗಳಿಂದ ಪೋಡಿನಲ್ಲಿ ಕಾಣಿಸಿಕೊಂಡಿರುವ ಕಾಯಿಲೆಯಿಂದ 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಅಲ್ಲದೆ, 50ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿರುವ ಘಟನೆ ಕಾಡಂಚಿನ ಉಯ್ಯಲನತ್ತ ಗ್ರಾಮದಲ್ಲಿ ನಡೆದಿದೆ. ಪಿ.ಜಿ.ಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಯ್ಯಲನತ್ತ ಪೋಡಿನಲ್ಲಿ ಗಿರಿಜನರೇ ಹೆಚ್ಚು ವಾಸಿಸುತ್ತಿದ್ದಾರೆ. 100ಕ್ಕೂ ಹೆಚ್ಚು ಕುಟುಂಬಗಳು ಗ್ರಾಮದಲ್ಲಿ ಕಳೆದ 15 ದಿನಗಳಿಂದ ಸುಮಾರು 30ಕ್ಕೂ ಹೆಚ್ಚು ಅಸ್ವಸ್ಥರಾಗಿದ್ದು, ಸೂಕ್ತ ಚಿಕಿತ್ಸೆ ದೊರಕದೆ ಕಂಗಾಲಾಗಿದ್ದಾರೆ.

ಚಿಕೂನ್‌ ಗುನ್ಯಾ ಶಂಕೆ: ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವವರೆಲ್ಲಾ ಮೇಲೆಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಕೆಲವರು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ. ಇನ್ನು ಕೆಲವರು ಮೇಲೆ ಏಳಲಾಗದೇ ತೆವಳಿಕೊಂಡೇ ನಡೆದಾಡಿದರೆ, ಮತ್ತೆ ಕೆಲವರು ಮಲಮೂತ್ರ ವಿಸರ್ಜನೆಗೂ ತೆರಳಲಾಗದೆ ಪರಿತಪಿಸುತ್ತಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿರುವವರಿಗಿಲ್ಲೆ ಕೈ ಕಾಲು ನೋವು, ಮೂಳೆಗಳ ಸಂಧುಗಳ ನೋವುಗಳಿಂದ ಬಳಲುತ್ತಿದ್ದಾರೆ. ಒಟ್ಟಾರೆ ಚಿಕೂನ್‌ ಗುನ್ಯಾ ರೋಗದ ಶಂಕೆ ವ್ಯಕ್ತವಾಗಿದ್ದು, ಗಿರಿಜನರಿಗೆ ಸೂಕ್ತ ಚಿಕಿತ್ಸೆ ದೊರಕದೇ ಪರದಾಡುವಂತಾಗಿದೆ.

ಮಾತ್ರೆ ನೀಡಿ ಕೈ ತೊಳೆದುಕೊಂಡ ವೈದ್ಯರು: 3 ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದ ವೈದ್ಯಾಧಿಕಾರಿಗಳ ತಂಡ ಸೂಕ್ತ ರೀತಿಯಲ್ಲಿ ಆರೋಗ್ಯ ತಪಾಸಣೆ ನಡೆಸದೇ ನೆಪಮಾತ್ರಕ್ಕೆ ಕೇವಲ 2 ಮಾತ್ರೆಗಳನ್ನಷ್ಟೇ ವಿತರಿಸಿ ತೆರಳಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದರೂ ಇಂಜೆಕ್ಷನ್‌ಗಳನ್ನೂ ಸಹ ನೀಡಿಲ್ಲ....

ಫೋಟೋ - http://v.duta.us/pHImeQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/fAi1mgAA

📲 Get Chamarajanagar News on Whatsapp 💬