ಪ್ರಧಾನಿ ಮೋದಿಯಿಂದ ಮಾರಕ ಆಡಳಿತ: ಸೊರಕೆ

  |   Udupinews

ಉಡುಪಿ: ಮಾಜಿ ಪ್ರಧಾನಿ ಯಾಗಿದ್ದ ಜವಾಹರಲಾಲ್‌ ನೆಹರೂ ಅವರು ದೇಶಕ್ಕೆ ಸಮರ್ಥ ನಾಯಕತ್ವ ವನ್ನು ಕೊಟ್ಟು ಮುಂಚೂಣಿಗೆ ತಂದಿದ್ದರು. ಆದರೆ ಈಗ ದೇಶಕ್ಕೆ ಮಾರಕವಾಗುವ ಆಡಳಿತ ವ್ಯವಸ್ಥೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆಯುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕ್‌ ಬಳಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2014ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯ ವರು ನೀಡಿದ ಆಶ್ವಾಸನೆಗಳಲ್ಲಿ ಯಾವುದೂ ಕೂಡ ಈಡೇರಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬ್ಯಾಂಕ್‌ಗಳ ವಿಲೀನ ಮಾಡುವ ಮೂಲಕ ಹೆಸರೇ ಇಲ್ಲದಂತೆ ಮಾಡಲಾಗಿದೆ. ಜಿಡಿಪಿ ಮಟ್ಟ ಕುಸಿದಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಬಡ ಜನರ ಏಳಿಗೆಗಾಗಿ ಯಾವ ಕೆಲಸವೂ ನಡೆಯುತ್ತಿಲ್ಲ. ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ; ಸಣ್ಣ ಕೈಗಾರಿಕೆಗಳು ನಿರ್ಮೂಲನೆಯಾಗುತ್ತಿವೆ. ಕೇಂದ್ರ ಸರಕಾರ ಇಡಿ, ಐಟಿ, ಸಿಬಿಐಗಳ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ವಿಪಕ್ಷ ಸರಕಾರವನ್ನು ನಿರ್ಮೂಲನೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತದಲ್ಲಿ 93ನೇ ಸ್ಥಾನದಲ್ಲಿದ್ದ ಹಸಿವಿನ ಪ್ರಮಾಣ ಇಂದು 102ಕ್ಕೆ ತಲುಪಿದೆ. ನಾಪತ್ತೆಯಾದ ಮೀನುಗಾರರ ಪ್ರಕರಣವೂ ಮುಚ್ಚಿಹೋಗಿದ್ದು, ಮೀನುಗಾರಿಕೆಯೂ ಸಂಕಷ್ಟದ ಸ್ಥಿತಿಯಲ್ಲಿದೆ ಎಂದರು....

ಫೋಟೋ - http://v.duta.us/7lFXkgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/x10XmQAA

📲 Get Udupi News on Whatsapp 💬