ಪಾರಂಪರಿಕ ಮರ ಪ್ರವಾಸಿ ತಾಣವಾಗಲಿ

  |   Bijapur-Karnatakanews

ವಿಜಯಪುರ: ಐತಿಹಾಸಿಕ ಸ್ಮಾರಕಗಳಂತೆ ನಗರದಲ್ಲಿ ಆದಿಲ್‌ ಶಹಿ ಅರಸರು ವಿದೇಶಗಳಿಂದ ತಂದು ನೆಟ್ಟು, ಬೆಳೆಸಿರುವ ಪ್ರಾಚೀನ ಗಿಡಮರಗಳಿಗೂ ಭೇಟಿಗೂ ಪ್ರವಾಸಿಗರು ಬರುವಂತೆ ಉತ್ತೇಜಿಸುವ ಕಾರ್ಯಯೋಜನೆ ರೂಪಿಸಬೇಕಿದೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಪ್ರೊ| ಮುರುಗೇಶ ಪಟ್ಟಣಶೆಟ್ಟಿ ಹೇಳಿದರು.

ವಿಜಯಪುರದ ಸೈಕ್ಲಿಂಗ್‌ ಕ್ಲಬ್‌ ನೇತೃತ್ವದಲ್ಲಿ ಯೋಗಾಪುರದಲ್ಲಿರುವ ಐತಿಹಾಸಿಕ ಬಾವೋಬಾಬ್‌ ಕುರಿತಾದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮರದ ಐತಿಹಾಸಿಕ ಅಂಶ ಹಾಗೂ ವಿಶೇಷತೆಗಳ ಕುರಿತು ಉಪನ್ಯಾಸ ನೀಡಿದ ಅವರು, ವಿಜಯಪುರದಲ್ಲಿರುವ ಈ ಅಪರೂಪದ ಮರ ಇಡೀ ಭಾರತದಲ್ಲಿ 27-30 ಈ ಪ್ರಭೇದದ ಮರಗಳಿವೆ. ಇದರಲ್ಲಿ ಮಹಾರಾಷ್ಟ್ರ, ಗುಜರಾತ್‌, ತಮಿಳನಾಡು, ಆಂಧ್ರ, ಗೋವಾಗಳಲ್ಲಿ ತಲಾ 2, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರಗಳಲ್ಲಿ ತಲಾ 1 ಮರ ಇದೆ ಎಂದು ವಿವರಿಸಿದರು.

ಅಡಾನ್ಸೊನಿಯಾ ಡಿಜಿಟಾಟಾ ಎಂಬ ಜೀವಶಾಸ್ತ್ರ ನಾಮಹೊಂದಿರುವ ಈ ಮರ 369 ವರ್ಷ ಹಳೆಯದಾಗಿದೆ. ಆದಿಲ್‌ಶಾಹಿ ಅರಸರು ಟರ್ಕಿಯಿಂದ ಈ ಮರವನ್ನು ತಂದು ಬೆಳೆಸಿದ್ದರು. ವಿಜಯಪುರದಲ್ಲಿ ಇಬ್ರಾಹಿಂರೋಜಾ ಹಿಂಭಾಗದಲ್ಲಿ ಇರುವ ಈ ಭವ್ಯ ಮರ ಇತ್ತೀಚೆಗೆ ನೆಲಕ್ಕುರುಳಿ, ನಾಶವಾಗಿದೆ. ಸದ್ಯ ವಿಜಯಪುರ ನಗರದ ಯೋಗಾಪುರದ ಸಯ್ಯದ್‌ ಶಾ ಇಮಾಮುದ್ದೀನ್‌ ಖಾದ್ರಿ ದರ್ಗಾದ ಹತ್ತಿರ ಇರುವ ಈ ಪ್ರಾಚೀನ ಮರ ಮುಂದಿನ ದಿನಗಳಲ್ಲಿ ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಹೊಂದಬೇಕು ಎಂದರು....

ಫೋಟೋ - http://v.duta.us/B_apYgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/P-NI5gAA

📲 Get Bijapur Karnataka News on Whatsapp 💬