ಪ್ರವಾಸಿ ತಾಣ ಬೀದರಗೆ ಗೈಡ್‌ ಕೊರತೆ

  |   Kalburaginews

„ಶಶಿಕಾಂತ ಬಂಬುಳಗೆ

ಬೀದರ: ಗಡಿ ನಾಡು ಬೀದರ ಚಾರಿತ್ರಿಕ ಕೋಟೆ ಕೊತ್ತಲುಗಳು, ಪಾರಂಪರಿಕ ಸ್ಮಾರಕಗಳನ್ನು ಹೊಂದಿರುವ ಐತಿಹಾಸಿಕ ಪ್ರವಾಸಿ ನಗರ. ಇಲ್ಲಿನ ವೈಭವ ಕಣ್ತುಂಬಿಕೊಳ್ಳಲು ದೇಶ ಮಾತ್ರವಲ್ಲ ವಿದೇಶಿಗರು ಭೇಟಿ ನೀಡುತ್ತಾರೆ. ಆದರೆ, ಗೈಡ್‌ ಗಳ ಕೊರತೆಯಿಂದ ಸೂಕ್ತ ಮಾಹಿತಿ ಸಿಗದಿರುವುದು ಪ್ರವಾಸಿಗರಿಗೆ ನಿರಾಶೆಯನ್ನುಂಟು ಮಾಡುತ್ತಿದೆ.

ಕರುನಾಡಿನ ಮುಕುಟ ಬೀದರ ಎಂದಾಕ್ಷಣ ಅದ್ಭುತ ಪ್ರವಾಸಿ ತಾಣವೆಂದು ನೆನಪಾಗುತ್ತದೆ. ನಗರದ ನಾಲ್ಕು ದಿಕ್ಕುಗಳಲ್ಲಿಯೂ ಒಂದಿಲ್ಲೊಂದು ಸ್ಮಾರಕಗಳು, ಅಳಿದುಳಿದ ಪಳೆಯುಳಿಕೆಗಳು ಇಂದಿಗೂ ಪುರಾತನ ಇತಿಹಾಸ ಮತ್ತು ಅರಸರ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಪ್ರತಿ ತಾಣಗಳು ತನ್ನದೇಯಾದ ಕಥೆ ಹೇಳುತ್ತವೆ. ಇದನ್ನು ಅರಿತುಕೊಳ್ಳಲು ದೇಶ-ವಿದೇಶದ ಸಂಶೋಧನಾ ವಿದ್ಯಾರ್ಥಿಗಳು, ತಜ್ಞರು ಮತ್ತು ಪ್ರವಾಸಿಗರು ನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ, ಇವರಿಗೆ ಮಹತ್ವ, ಹಿನ್ನೆಲೆಯನ್ನು ತಿಳಿಸುವವರು ಯಾರೂ ಇಲ್ಲದಂತಾಗಿದೆ.

ಕೇಂದ್ರ ಪುರಾತತ್ವ ಇಲಾಖೆಯ ಅಧಿಧೀನದ ರಾಷ್ಟ್ರೀಯ ಸಂರಕ್ಷಿತ ಸ್ಮಾರಕವಾಗಿರುವ ಬೀದರನ ಬಹುಮನಿ ಕೋಟೆಯು ದಕ್ಷಿಣ ಭಾರತದಲ್ಲೇ ಸುಭದ್ರ ಹಾಗೂ ಭವ್ಯ ಕೋಟೆ. ಕೋಟೆ ಒಳಾಂಗಣದಲ್ಲಿ ಅದ್ಭುತ ಉದ್ಯಾನ ಹಸಿರು ಹೊದಿಸಿದಂತಾಗಿದ್ದು, ಮತ್ತಷ್ಟು ಮೆರಗನ್ನು ಹೆಚ್ಚಿಸಿದೆ. ಆದರ್ಶ ಸ್ಮಾರಕ ಪಟ್ಟಿ ಹಾಗೂ ವರ್ಲ್ಡ್ ಮೋನುಮೆಂಟ್‌ ಫಂಡ್‌ಗೆ ಆಯ್ಕೆಯಾಗಿರುವ ಬಹುಮನಿ ಕೋಟೆ ಹಲವು ಸ್ಮಾರಕಗಳನ್ನು ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದೆ....

ಫೋಟೋ - http://v.duta.us/qG6cbgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Q9od7QAA

📲 Get Kalburagi News on Whatsapp 💬