ಪ್ಲಾಸ್ಟಿಕ್‌ ತ್ಯಾಜ್ಯದಲ್ಲಿ ಇಂಧನ ಶಕ್ತಿ

  |   Dharwadnews

ಹುಬ್ಬಳ್ಳಿ: ಹತ್ತಾರು ವರ್ಷಗಳು ಗತಿಸಿದರೂ ಕರಗದ ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಯೋಗಾರ್ಥ ಪಾಲಿಕೆ ಕೈಗೊಂಡ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಅ. 2ರಂದು ಗಾಂಧಿ ಜಯಂತಿಯಂದು ಅವಳಿ ನಗರದಲ್ಲಿ ಸಂಗ್ರಹಿಸಲಾದ 6 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಾಗಲಕೋಟೆಯ ಜೆ.ಕೆ.ಸಿಮೆಂಟ್‌ ಕಾರ್ಖಾನೆ ಸಂಗ್ರಹಿಸಿಕೊಂಡು ಇಂಧನವಾಗಿ ಬಳಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯನ್ವಯ ರಾಜ್ಯ ಸರಕಾರ ಗಾಂಧಿ ಜಯಂತಿಯಂದು ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಲು ಸ್ಥಳಿಯ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ಮಹಾನಗರ ಪಾಲಿಕೆ ಕೈಗೊಂಡ ಅಭಿಯಾನಕ್ಕೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಹಲವು ಸಂಘ-ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳು ಸಕ್ರಿಯವಾಗಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹದಲ್ಲಿ ತೊಡಗಿದ್ದವು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸಂಗ್ರಹಿಸಿದ್ದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಾರವಾರ ರಸ್ತೆಯ ಹೇಸಿಮಡ್ಡಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಪ್ರತ್ಯೇಕವಾಗಿ ಸುರಿಯಲಾಗಿತ್ತು.

ಸಿಮೆಂಟ್‌ ಫ್ಯಾಕ್ಟರಿಗೆ ಯಾಕೆ?: ಸಿಮೆಂಟ್‌ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಂಧನದ ಬಳಕೆಯಾಗುತ್ತದೆ. ಕಲ್ಲಿದ್ದಲಿನೊಂದಿಗೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಇಂಧನವಾಗಿ ಬಳಸುವುದರಿಂದ ಕಲ್ಲಿದ್ದಲು ಉಳಿಸಲು ಸಾಧ್ಯವಾಗಿದೆ. ಕಲ್ಲಿದ್ದಲಿನೊಂದಿಗೆ ಪ್ಲಾಸ್ಟಿಕ್‌ ತ್ಯಾಜ್ಯ ದಹಿಸಬಹುದಾಗಿದೆ. ಸಿಮೆಂಟ್‌ ಕಾರ್ಖಾನೆಗಳಲ್ಲಿ ಹೊಗೆ ಹೋಗುವ ಚಿಮಣಿಗಳಲ್ಲಿ ಇಲೆಕ್ಟ್ರೋಸ್ಟಾಟಿಕ್‌ ಪ್ರಿಸಿಪೇಟರ್‌ ಕಡ್ಡಾಯವಾಗಿರುತ್ತದೆ. ಇದು ಪರಿಸರ ಮಾಲಿನ್ಯ ಮಾಡುವ ವಿಷಕಾರಕ ಅನಿಲಗಳನ್ನು ಸಂಗ್ರಹಿಸಿಟ್ಟುಕೊಂಡು, ಪರಿಸರಕ್ಕೆ ಮಾಲಿನ್ಯ ಉಂಟು ಮಾಡದ ಹೊಗೆಯನ್ನು ಮಾತ್ರ ಚಿಮಣಿ ಮೂಲಕ ಹೊರಗೆ ಬಿಡುತ್ತದೆ....

ಫೋಟೋ - http://v.duta.us/92IvRgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/HfYsIgAA

📲 Get Dharwad News on Whatsapp 💬