ಪ್ಲಾಸ್ಟಿಕ್‌ ಸಂಗ್ರಹಕ್ಕೆ ಕೈಜೋಡಿಸಿದ ವಿದ್ಯಾರ್ಥಿಗಳು

  |   Mysorenews

ಮೈಸೂರು: ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಮುಂಜಾನೆಯೇ ಕೈಗೆ ಗ್ಲೌಸ್‌ ತೊಟ್ಟು, ಪೊರಕೆ ಹಿಡಿದು ಶಾಲಾ ಆವರಣ ದಲ್ಲಿದ್ದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ ಹಾಗೂ ತಮ್ಮ ಮನೆಗಳಲ್ಲಿ ಸಂಗ್ರಹವಾಗಿದ್ದ ನಿಷೇಧಿತ ಪ್ಲಾಸ್ಟಿಕನ್ನು ತಂದು ಶಾಲಾ ಮುಂಭಾಗದಲ್ಲಿ ನಗರ ಪಾಲಿಕೆ ಸ್ಥಾಪನೆ ಮಾಡಿದ್ದ ಡಸ್ಟ್‌ ಬೀನ್‌ಗೆ ಹಾಕುವ ಮೂಲಕ ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿದರು.

ಪ್ಲಾಸ್ಟಿಕ್‌ ಸಂಗ್ರಹ ಮತ್ತು ಶ್ರಮದಾನ: ಪ್ಲಾಸ್ಟಿಕ್‌ ಬಳಕೆ ಪರಿಸರಕ್ಕೆ ಮಾರಕವಾಗುವುದರ ಜೊತೆಗೆ ಮಾನವನ ಆರೋಗ್ಯದ ಮೇಲು ಕೆಟ್ಟ ಪರಿಣಾಮ ಬೀರಲಿದೆ. ಹಾಗೂ ಅರಣ್ಯ ಪ್ರದೇಶ ನಾಶವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮಕ್ಕಳ ದಿನದ ಪ್ರಯುಕ್ತ ನಗರದ 65 ವಾರ್ಡ್‌ಗಳಿರುವ ಸುಮಾರು 500ಕ್ಕೂ ಹೆಚ್ಚು ಶಾಲೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಸಂಗ್ರಹ ಮತ್ತು ಶ್ರಮದಾನ ಹಮ್ಮಿಕೊಂಡಿತ್ತು.

ಕೈಗೆ ಗ್ಲೌಸ್‌ ತೊಟ್ಟು, ಪೊರಕೆ ಹಿಡಿದ ಮಕ್ಕಳು: ಸಾಂಕೇತಿಕವಾಗಿ ಕುವೆಂಪುನಗರದಲ್ಲಿರುವ ವಿದ್ಯಾ ವರ್ಧಕ ಶಾಲೆಯಲ್ಲಿ ಆಯೋಜಿಸಿದ್ದ ಸಮಾ ರಂಭದಲ್ಲಿ ಮಕ್ಕಳೆಲ್ಲಾ ಬೆಳಗ್ಗೆಯೇ ಕೈಗೆ ಗ್ಲೌಸ್‌ ತೊಟ್ಟು, ಪೊರಕೆ ಹಿಡಿದು ಸ್ವತ್ಛತಾ ಕಾರ್ಯ ನಡೆಸಿದರು. ಶಾಲಾ ಆವರಣವನ್ನು ಸ್ವತಃ ಶುಚಿಗೊಳಿಸಿದ ಎಲ್ಲ ಮಕ್ಕಳು "ಪ್ಲಾಸ್ಟಿಕ್‌' ವಿರುದ್ಧ ಜಾಗೃತಿ ಮೂಡಿಸಿ ಅರ್ಥಪೂರ್ಣವಾಗಿ ಮಕ್ಕಳ ದಿನವನ್ನು ಆಚರಿಸಿದರು....

ಫೋಟೋ - http://v.duta.us/HulVcAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/QYyDsgAA

📲 Get Mysore News on Whatsapp 💬