ಬೀರೂರು ಪುರಸಭೆ ಅತಂರ

  |   Chikkamagalurunews

ಕಡೂರು: ಬೀರೂರು ಪುರಸಭೆ ಚುನಾವಣೆ ಮತ ಎಣಿಕೆ ಗುರುವಾರ ನಡೆದಿದ್ದು, ಈ ಬಾರಿಯೂ ಮತದಾರರು ಅತಂತ್ರ ಪುರಸಭೆಗೆ ಆಶೀರ್ವಾದ ಮಾಡಿದ್ದಾರೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಯಥಾಸ್ಥಿತಿ ಕಾಪಾಡಿಕೊಂಡಿರುವುದು ವಿಶೇಷವಾಗಿದೆ.

ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಧಿಕಾರಕ್ಕೆ ಬರಲು ಇನ್ನೂ 2 ಸ್ಥಾನಗಳ ಅವಶ್ಯಕತೆ ಇದೆ. ಕಾಂಗ್ರೆಸ್‌ಗೆ ಮೂರು ಸ್ಥಾನಗಳ ಅಗತ್ಯವಿದೆ. ಒಟ್ಟು 23 ವಾರ್ಡ್‌ಗಳಲ್ಲಿ ಬಿಜೆಪಿ 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್‌ 9 ಸ್ಥಾನ, ಜೆಡಿಎಸ್‌ 2 ಸ್ಥಾನ ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಸ್ಥಾನ ಗಳಿಕೆತಿರುವು ಮುರುವು ಆಗಿರುವುದಷ್ಟೇ ಸಾಧನೆ ಎನ್ನಲಾಗುತ್ತಿದೆ.

ಕಳೆದ ಬಾರಿ ಬಿಜೆಪಿ 9 ಸ್ಥಾನಗಳಲ್ಲಿ ಕಾಂಗ್ರೆಸ್‌ 10 ಸ್ಥಾನದಲ್ಲಿ, ಜೆಡಿಎಸ್‌ 2 ಸ್ಥಾನದಲ್ಲಿ ಹಾಗೂ ಓರ್ವ ಪಕ್ಷೇತರ ಮತ್ತು ಓರ್ವ ಕೆಜೆಪಿ ಸದಸ್ಯರು ಪುರಸಭೆಗೆ ಪ್ರವೇಶ ಪಡೆದಿದ್ದರು. ಈ ಬಾರಿ

ಬಿಜೆಪಿ 10 ಸ್ಥಾನ ಗಳಿಸಿ ಅತೀ ಹೆಚ್ಚಿನ ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ 9 ಸ್ಥಾನ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಜೆಡಿಎಸ್‌ ಕಳೆದ ಬಾರಿಯ ಹಾಗೆಯೇ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎಲ್ಲ 23 ವಾರ್ಡ್‌ಗಳಲ್ಲೂ ತನ್ನಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ, ಒಟ್ಟಾರೆ 5,867 ಮತಗಳನ್ನು ಗಳಿಸುವ ಮೂಲಕ ಅತೀ ಹೆಚ್ಚು ಮತ ಪಡೆದ ಪಕ್ಷವಾಗಿದೆ....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/VMxmDgAA

📲 Get Chikkamagaluru News on Whatsapp 💬