ಬರ ಹೊಡೆತದಲ್ಲೂ ಸಹಕಾರದ ಛಾಪು

  |   Chitradurganews

„ತಿಪ್ಪೇಸ್ವಾಮಿ ನಾಕೀಕೆರೆ

ಚಿತ್ರದುರ್ಗ: ಬಿಡದೆ ಕಾಡುವ ಬರದ ಅಸಹಕಾರ ನಡುವೆಯೂ ಜಿಲ್ಲೆಯಲ್ಲಿ ಸಹಕಾರ ಸಂಘಗಳು ತಮ್ಮದೇ ಆದ ಛಾಪು ಮೂಡಿಸುತ್ತಿವೆ. ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಸಹಕಾರ ಚಾಲ್ತಿಯಲ್ಲಿದೆ. ಒಂದು ಕಾಲಕ್ಕೆ ಮಿಂಚಿದ ಕೆಲ ವರ್ಗದ ಸಹಕಾರ ಸಂಘಗಳು ಕ್ರಮೇಣ ಕಾಲದ ಹೊಡೆತಕ್ಕೆ ಸಿಲುಕಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಕೆಲ ಸಹಕಾರ ಸಂಘಗಳು ಸಾಧನೆ ಹಾದಿಯಲ್ಲಿ ಸಾಗುತ್ತಿವೆ.

ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದ ಡಿಸಿಸಿ ಬ್ಯಾಂಕ್‌ನ ಆಧುನೀಕರಣ, ದಿನೇ ದಿನೇ ಜನರನ್ನು ತಲುಪುತ್ತಿರುವುದು ಸಹಕಾರ ಕ್ಷೇತ್ರಕ್ಕೆ ಭವಿಷ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಂತೆ ಈ ಕ್ಷೇತ್ರದಲ್ಲಿ ಎಲ್ಲವೂ ಸರಿಯಿದೆ ಎಂದರ್ಥವಲ್ಲ. ನೂರಾರು ಸಹಕಾರ ಸಂಘಗಳು ನಷ್ಟದ ಹಾದಿಯಲ್ಲಿವೆ. ಕೆಲವು ಮುಚ್ಚುವ ಸ್ಥಿತಿಯಲ್ಲಿವೆ.

ಬದಲಾದ ಕಾಲಮಾನಕ್ಕೆ ಸರಿಯಾಗಿ ಹೊಂದಿಕೊಳ್ಳಲು ಈ ಕ್ಷಣಕ್ಕೂ ಸಹಕಾರ ಸಂಘಗಳು ಹೆಣಗಾಡುತ್ತಿವೆ. ಬೆರಳೆಣಿಕೆ ಸಹಕಾರ ಸಂಘಗಳು ಮಾತ್ರ ಗಣಿಕೀಕರಣಗೊಂಡಿವೆ. ಸರ್ಕಾರದಿಂದ ಸಂಘಗಳಿಗೆ ಸಂಬಂ ಧಿಸಿದ ಮೇಲ್‌ ಬಂದರೆ ಅದನ್ನು ನೋಡುವಷ್ಟು, ಪ್ರಿಂಟ್‌ ಮಾಡಿಕೊಳ್ಳುವ ವ್ಯವಸ್ಥೆಯೂ ಇಲ್ಲದಂತಹ ಸಂಘಗಳು ಇರುವುದು ನಷ್ಟದ ಹಾದಿಗೆ ಕಾರಣವಾಗಿರಬಹುದು.

ಸಾವಿರ ಸಮೀಪ ಇವೆ: ಜಿಲ್ಲೆಯಲ್ಲಿ ಇದುವರೆಗೆ 989 ಸಹಕಾರ ಸಂಘಗಳು ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 3.25ಲಕ್ಷ ಸದಸ್ಯರಿದ್ದಾರೆ. ಇದರಲ್ಲಿ 753 ಸಂಘಗಳು ಚಾಲ್ತಿಯಲ್ಲಿದ್ದು, 50 ಸ್ಥಗಿತಗೊಂಡಿವೆ. 186 ಸಂಘಗಳು ಸಮಾಪನೆ ಹಂತದಲ್ಲಿವೆ. ಸಹಕಾರ ಸಂಘಗಳ ನೋಂದಣಿ ಮಾತ್ರ ಆನ್‌ ಲೈನ್‌ನಲ್ಲಿದೆ. ಉಳಿದಂತೆ ಗಣಕೀಕರಣ ಇನ್ನಷ್ಟೇ ಆಗಬೇಕಷ್ಟೆ. ಚಾಲ್ತಿಯಲ್ಲಿರುವ 753 ಸಹಕಾರ ಸಂಘಗಳಲ್ಲಿ 325 ಲಾಭದಲ್ಲಿವೆ....

ಫೋಟೋ - http://v.duta.us/gWLbzAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/g2dblgAA

📲 Get Chitradurga News on Whatsapp 💬