ಬಸ್ರೂರು ಮೂರುಕೈ ಹೊಸ ಅಂಡರ್‌ಪಾಸ್‌ ನಿರಾತಂಕ

  |   Udupinews

ಕುಂದಾಪುರ: ಬಸ್ರೂರು ಮೂರು ಕೈಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಪಾದಚಾರಿ ಅಂಡರ್‌ಪಾಸ್‌ ಕಾಮಗಾರಿ ನಿರಾತಂಕ ವಾಗಿ ನಡೆಯಲಿದೆ. ಕೋಡಿ ಭಾಗದ ಜನರ ಬೇಡಿಕೆಯಾಗಿ ಯು ಟರ್ನ್ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಗುರುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ "ಉದಯವಾಣಿ' ಜತೆ ಮಾತನಾಡಿದರು.

ಬಸ್ರೂರು ಮೂರುಕೈಯಲ್ಲಿ ಈಗಾಗಲೇ ದೊಡ್ಡ ಅಂಡರ್‌ಪಾಸ್‌ ಕಾಮಗಾರಿ ಮುಗಿದಿದೆ. ಬಸ್ರೂರು ಕಡೆಯಿಂದ ಬರುವ ವಾಹನಗಳು ಕುಂದಾಪುರ ಕಡೆಗೆ ಬರಲು ಈ ಅಂಡರ್‌ಪಾಸ್‌ ಮೂಲಕ ತೆರಳಬಹುದು. ಇದರಲ್ಲಿ ತಲಾ 3 ಅಡಿಗಳಂತೆ ಎರಡು ಬದಿಯಲ್ಲಿ ಪಾದಚಾರಿಗಳಿಗೆ ನಡೆದಾಡಲು ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗ ಕಡೆಯಿಂದ ಬರುವ ಘನವಾಹನಗಳು, ದೊಡ್ಡ ಟ್ಯಾಂಕರ್‌ಗಳು, 10 ಚಕ್ರದ ವಾಹನಗಳು ತಿರುವು ಕಷ್ಟ ಎಂದು ಈ ಕಾಮಗಾರಿ ಸಂದರ್ಭ ವಾಹನ ಹೋಗಲು ಅನುವು ಮಾಡಿ ಪಾದಚಾರಿ ರಸ್ತೆಯನ್ನು ತೆಗೆಯಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ನೀಡಲೇಬೇಕು. ಇದರಿಂದಾಗಿ ಪ್ರತ್ಯೇಕ ಅಂಡರ್‌ಪಾಸ್‌ ರಚನೆಗೆ ಮಂಜೂರಾತಿ ದೊರಕಿದ್ದು ಟಿ.ಟಿ. ರೋಡ್‌ಗೆ ತಿರುಗುವಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರು....

ಫೋಟೋ - http://v.duta.us/0QYeKAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/AI-_9QAA

📲 Get Udupi News on Whatsapp 💬