ಬಸ್‌ ಆದ್ಯತಾ ಪಥ ಅಯೋಮಯ

  |   Bangalore-Citynews

ಬೆಂಗಳೂರು: ಸಂಚಾರ ದಟ್ಟಣೆ ನಿರ್ವಹಣೆಯೇ ದೊಡ್ಡ ಸವಾಲಾಗಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ನಾನಾ ಪ್ರಯೋಗಗಳು ನಡೆಯುತ್ತಿವೆ.

ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಆರಂಭಗೊಂಡಿರುವ "ಬಸ್‌ ಆದ್ಯತಾ ಪಥ' (ಬಸ್‌ಲೇನ್‌) ಕೂಡ ಒಂದು. ಆದರೆ, ಸದ್ಯದ ಮಟ್ಟಿಗೆ ಇದ ಯಶಸ್ವಿಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೆ ಲೋಕಾರ್ಪಣೆ ಕೂಡ ಅನುಮಾನವಾಗಿದೆ. ಸಂಚಾರ ಪೊಲೀಸ್‌ ವಿಭಾಗ, ಬಿಎಂಟಿಸಿ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಿರ್ಮಿಸಲಾದ ಈ ಪಥದಲ್ಲಿ ಒಂದೆಡೆ ಸಾರ್ವಜನಿಕರ ಅಸಹಕಾರ. ಮತ್ತೂಂದೆಡೆ ವೈಜ್ಞಾನಿಕವಾಗಿ ನಿರ್ಮಾಣಗೊಳ್ಳದ ಪಥದ ನಿರ್ವಹಣೆ ಹೇಗೆ ಎಂಬುದರ ಗೊಂದಲ. ಈ ಮಧ್ಯೆ ಉಪ ಚುನಾವಣೆ ನೀತಿ ಸಂಹಿತೆ ಬಂದಿದೆ. ಇದರಿಂದ ಯೋಜನೆ ಲೋಕಾರ್ಪಣೆ ಭಾಗ್ಯ ದೊರೆಯುತ್ತಿಲ್ಲ.

ದೂರು; ಬೋಲಾರ್ಡ್ಸ್‌ ತೆರವು: ಸುಮಾರು 13 ಕಿ.ಮೀ. ಉದ್ದದ ಈ ಮಾರ್ಗದ 12 ಮೀಟರ್‌ (ಅಗಲ) ರಸ್ತೆಯ ಪೈಕಿ 3.5 ಮೀಟರ್‌ ರಸ್ತೆಯನ್ನು ಆದ್ಯತಾ ಪಥಕ್ಕೆ ಬಳಸಲಾಗಿದೆ. ಆರಂಭಿಕವಾಗಿ ಆರು-ಏಳು ಕಿ.ಮೀ. ರಸ್ತೆಯಲ್ಲಿ ಕನಿಷ್ಠ ಎರಡೂವರೆ ಅಡಿಗೆ ಒಂದರಂತೆ ನೂರಾರು ಕಬ್ಬಿಣದ ಬೋಲಾರ್ಡ್ಸ್‌, ಕ್ಯಾಟ್‌ ಐಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದುದರಿಂದ ಸಾರ್ವಜನಿಕರೇ ನೇರವಾಗಿ ಬಿಬಿಎಂಪಿಗೆ ದೂರು ನೀಡಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಷ್ಟೇ ಬೋಲಾರ್ಡ್‌ಗಳನ್ನು ತೆರೆವುಗೊಳಿಸಲಾಗಿದೆ. ಇದೀಗ ಈ ಮಾರ್ಗದುದ್ದಕ್ಕೂ ಹಳದಿ ಬಣ್ಣದಲ್ಲಿ ಎರಡು ಸಾಲುಗಳನ್ನು ಎಳೆಯಲಾಗಿದೆ. ಜತೆಗೆ ಬಸ್‌ ನಿಲ್ದಾಣಗಳ ಮುಂಭಾಗ (ಬಸ್‌ ನಿಲ್ಲುವ ಸ್ಥಳ) ಕೆಂಪು ಬಣ್ಣ ಲೇಪನ ಮಾಡಲಾಗುತ್ತಿದೆ....

ಫೋಟೋ - http://v.duta.us/E7BnggAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Th_mtAAA

📲 Get Bangalore City News on Whatsapp 💬