ಮುಖ್ಯಮಂತ್ರಿ ಆಗಲೇಬೇಕೆಂಬ ಚಟ ನನಗಿಲ್ಲ

  |   Karnatakanews

ಬೆಂಗಳೂರು: "ಬಿ.ಎಸ್‌. ಯಡಿಯೂರಪ್ಪ ಅವರಂತೆ ನನಗೆ ಮತ್ತೆ ಮುಖ್ಯ ಮಂತ್ರಿ ಯಾಗಲೇಬೇಕು ಎಂಬ ಚಟ ಇಲ್ಲ. ಆದರೆ ರಾಜ್ಯ ಹಾಗೂ ಕ್ಷೇತ್ರದ ಜನತೆಯ ಅಭಿಪ್ರಾಯದಂತೆ ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ತೀರ್ಮಾನವಾಗುತ್ತದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ಜನರ ಆಶೀರ್ವಾದ ದೊರೆತರೆ ಮತ್ತೆ ಮುಖ್ಯಮಂತ್ರಿ ಯಾಕಾಗಬಾರದು ಎಂದು ಪ್ರಶ್ನಿಸಿದ್ದಾರೆ.

ಉದಯವಾಣಿ ಕಚೇರಿಯಲ್ಲಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಸೆ ಆಮಿಷಗಳಿಗೆ ಬಲಿಯಾಗಿ ಹದಿನೈದು ಮಂದಿ ಅನರ್ಹತೆ ಕಳಂಕ ಹೊತ್ತಿರುವುದೇ ಈ ಉಪ ಚುನಾವಣೆಯಲ್ಲಿ ನಮ್ಮ ಪ್ರಮುಖ ವಿಚಾರ. ಅವರನ್ನು ಸೋಲಿಸುವುದೇ ನಮ್ಮ ಗುರಿ, ಗೆಲ್ಲುವ ಅಭ್ಯರ್ಥಿ ಎಂಬ ಮಾನದಂಡವನ್ನು ಆಧರಿಸಿ ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

ಈಗಲೂ ಸರಕಾರಕ್ಕೆ ಬಹುಮತ ಇಲ್ಲ. ಹದಿನೇಳು ಮಂದಿಯ ಕೈಯಲ್ಲಿ ರಾಜೀನಾಮೆ ಕೊಡಿಸಿ ವಿಧಾನಸಭೆ ಸಂಖ್ಯಾಬಲ ಕಡಿಮೆ ಮಾಡಿಸಿ ಸರಕಾರ ರಚಿಸಿದ್ದಾರೆ. ಉಪ ಚುನಾವಣೆ ಅನಂತರ ಬಿಜೆಪಿ ಎಂಟು ಸ್ಥಾನ ಗಳಿಸದಿದ್ದರೆ ಸರಕಾರಕ್ಕೆ ಬಹುಮತವೇ ಇಲ್ಲದಂತಾಗುತ್ತದೆ. ಆಗ ಯಡಿಯೂರಪ್ಪ ರಾಜೀನಾಮೆ ನೀಡ ಬೇಕಾಗು ತ್ತದೆ. ಹೀಗಾಗಿ ಮತ್ತೆ ಚುನಾವಣೆಗೆ ಹೋಗ ಬೇಕಾಗುತ್ತದೆ ಎಂದು ತಿಳಿಸಿದರು....

ಫೋಟೋ - http://v.duta.us/Gte7BgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/U6ZsEAAA

📲 Get Karnatakanews on Whatsapp 💬