ಮೀನುಗಾರ ಮಹಿಳೆಯರ ಪ್ರತಿಭಟನೆ

  |   Uttara-Kannadanews

ಕುಮಟಾ: ಪುರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಮೀನು ಮಾರಾಟಗಾರಮಹಿಳೆಯರಿಗೆ ಹಲವು ತಿಂಗಳಿಂದ ಯಾವುದೇ ಮೂಲ ಸೌಲಭ್ಯ ದೊರೆಯುತ್ತಿಲ್ಲ. ಆದರೂ ಪುರಸಭೆ ಶುಲ್ಕ ವಸೂಲಿ ಮಾಡುತ್ತಿದೆ. ಇದನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ನೂರಾರು ಮೀನುಗಾರ ಮಹಿಳೆಯರು ಗುರುವಾರ ಮೀನು ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಶುಲ್ಕದ ವಿಚಾರದಲ್ಲಿ ಪುರಸಭೆಯವರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಮಾರುಕಟ್ಟೆ ಶುಲ್ಕವನ್ನು ಸಂಘದ ಮೂಲಕವೇ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ವಸೂಲಿ ಮಾಡುತ್ತ ಬರಲಾಗಿದೆ. ಇನ್ನು ಮುಂದೆಯೂ ನಮ್ಮ ಸಂಘಕ್ಕೇ ಅವಕಾಶ ಕೊಡಬೇಕು. ಈಗ ಮೀನು ಮಾರುಕಟ್ಟೆ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದೆ.

ಮಳೆ-ಬಿಸಿಲಿಗೆ ಮೈಒಡ್ಡಿಕೊಂಡು ಮಾರುಕಟ್ಟೆ ಹೊರಭಾಗದಲ್ಲೇ ಮೀನು ಮಾರಾಟಕ್ಕೆ ಕುಳಿತುಕೊಳ್ಳುತ್ತಿದ್ದೇವೆ. ಹೀಗಿರುವಾಗ ಸದ್ಯ ಪುರಸಭೆಯವರು ನಮ್ಮಿಂದ ಜಾಗದ ಶುಲ್ಕ ವಸೂಲಿ ಮಾಡಬಾರದು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಆಗಮಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದರಲ್ಲದೇ, ಮೀನುಮಾರಾಟಗಾರ ಮಹಿಳೆಯರು ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೂ ಪೂರ್ವದಲ್ಲಿ ಪುರಸಭೆಗೆ ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು....

ಫೋಟೋ - http://v.duta.us/WM5gqgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/zAJoggAA

📲 Get Uttara Kannada News on Whatsapp 💬