ರಾಜ್ಯದಲ್ಲಿ ತಾಯಿ ಮರಣ ಪ್ರಮಾಣ ಇಳಿಕೆ

  |   Bangalore-Citynews

ಬೆಂಗಳೂರು: ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ರಾಜ್ಯದಲ್ಲಿ ಶೇ.10.2ಕ್ಕೆ ಇಳಿಕೆಯಾಗಿದೆ.

ಕೇಂದ್ರ ಆರೋಗ್ಯ ಮಂತ್ರಾಲಯದ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಇತ್ತೀಚೆಗೆ ಬಿಡುಗಡೆ ಮಾಡಿದ ಎಸ್‌ಆರ್‌ ಎಸ್‌ (ಸ್ಯಾಂಪಲ್‌ ರಿಜಿಸ್ಟ್ರೇಷನ್‌ ಸಿಸ್ಟಂ) ಬುಲೆಟಿನ್‌ ಪ್ರಕಾರ ಕರ್ನಾಟಕದಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ಶೇ.10.2 ಇಳಿಮುಖವಾಗಿದ್ದು, ಇದು ದೇಶದ ಅತಿ ಹೆಚ್ಚಿನ ಸಾಧನೆಯಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಹೆರಿಗೆ ವೇಳೆ ತಾಯಿಯ ಮರಣದ ಅನುಪಾತ ಕುರಿತಂತೆ ಎಸ್‌ಆರ್‌ಎಸ್‌ ಬುಲೆಟಿನ್‌ ಬಿಡುಗಡೆ ಮಾಡುತ್ತಿದ್ದು, ಇತ್ತೀಚೆಗೆ 2015-17ನೇ ಅವಧಿಯ ಬುಲೆಟಿನ್‌ ಬಿಡುಗಡೆಯಾಗಿದೆ.

2014-16ರ ಬುಲೆಟಿನ್‌ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ 108 ತಾಯಂದಿರು ಮೃತಪಡುತ್ತಿದ್ದರು. 2015-17ರ ಅವಧಿಯ ಬುಲೆಟಿನ್‌ನಲ್ಲಿ ಇದು 97ಕ್ಕೆ ಇಳಿದಿದೆ. ಎರಡನೇ ಸ್ಥಾನ ಮಹಾರಾಷ್ಟ್ರಕ್ಕೆ ಲಭಿಸಿದ್ದು, ಇಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ಶೇ. 9.8ರಷ್ಟು ಇಳಿದಿದ್ದರೆ, ಮೂರನೇ ಸ್ಥಾನ ಪಡೆದಿರುವ ಕೇರಳದಲ್ಲಿ ಈ ಪ್ರಮಾಣ ಶೇ. 8.7ರಷ್ಟಿದೆ. ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಹೆರಿಗೆ ಪ್ರಕರಣಗಳು ನಡೆಯುವ ರಾಜ್ಯಗಳನ್ನು ಈ ಸಮೀಕ್ಷೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ 20 ರಾಜ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಲಾಗಿದೆ. ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ಇಳಿ ಮುಖಕ್ಕೆ ಸಂಬಂಧಿಸಿದಂತೆ ದೇಶದ ಒಟ್ಟಾರೆ ಸರಾಸರಿ ಶೇ. 6.2ರಷ್ಟಿದ್ದರೆ, ಕರ್ನಾಟಕದಲ್ಲಿ ಇಳಿಮುಖ ಪ್ರಮಾಣ ಶೇ. 10.2ರಷ್ಟಿದ್ದು, ಇದೊಂದು ದಾಖಲೆಯೇ ಸರಿ ಎಂಬುದು ತಜ್ಞರ ಅಭಿಮತವಾಗಿದೆ....

ಫೋಟೋ - http://v.duta.us/CqAB2AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_Vr9pQAA

📲 Get Bangalore City News on Whatsapp 💬